HomeFresh News50ನೇ ವರ್ಷದ ಸುವರ್ಣ ಸಂಭ್ರಮಕ್ಕೆ ಕಾಲಿಟ್ಟ ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘ

50ನೇ ವರ್ಷದ ಸುವರ್ಣ ಸಂಭ್ರಮಕ್ಕೆ ಕಾಲಿಟ್ಟ ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘ

ಬೈಂದೂರು: ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘವು ಯಶಸ್ವಿಯಾಗಿ 49 ವರ್ಷಗಳನ್ನು ಪೂರೈಸಿ, 50ನೇ ವರ್ಷದ ಸುವರ್ಣ ಸಂಭ್ರಮಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಸುವರ್ಣ ಸಂಭ್ರಮ ಆಚರಣೆಯ ಪೂರ್ವಭಾವಿ ಸಭೆಯು ಶನಿವಾರ ನಾಗೂರು ಒಡೆಯರ ಮಠದ ಗೋಪಾಲಕೃಷ್ಣ ಕಲಾಮಂದಿರದಲ್ಲಿ ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಸುವರ್ಣ ಸಂಭ್ರಮವನ್ನು ಅರ್ಥಪೂರ್ಣ ಹಾಗೂ ವೈಭವದಿಂದ ಹೇಗೆ ಆಯೋಜಿಸಬೇಕು ಎಂಬ ಕುರಿತು ಸಂಘದ ವ್ಯಾಪ್ತಿಯ ವಿವಿಧ ಗಣ್ಯರು, ಸದಸ್ಯರು ಹಾಗೂ ನಿರ್ದೇಶಕರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಕಾರ್ಯಕ್ರಮದ ರೂಪುರೇಷೆ, ವಿವಿಧ ಸಮಿತಿಗಳ ರಚನೆ ಹಾಗೂ ಸಾರ್ವಜನಿಕರ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಉಪ ವ್ಯವಸ್ಥಾಪಕರಾದ ಶಂಕರ್ ನಾಯಕ್, ಬೈಂದೂರು ವಲಯದ ವಿಸ್ತರಣಾಧಿಕಾರಿ ವಾಸುದೇವ್ ಪುರಾಣಿಕ್, ಕುಂದಾಪುರ ವಲಯದ ವಿಸ್ತರಣಾಧಿಕಾರಿ ರಾಜಾರಾಮ್, ಸಂಘದ ಉಪಾಧ್ಯಕ್ಷೆ ಶಾರದ ದೇವಾಡಿಗ, ನಿರ್ದೇಶಕರಾದ ಪದ್ಮನಾಭ ಹೆಬ್ಬಾರ್, ಕೆ. ಗೋಪಾಲ ದೇವಾಡಿಗ, ನೀಲು ಯಾನೆ ಸರೋಜಾ, ಸುಬ್ಬು, ಸರೋಜ, ಸುಮಂಗಲ ಕಾರಂತ, ವಿಶಾಲ ದೇವಾಡಿಗ ಹಾಗೂ ಸಿಬ್ಬಂದಿಗಳಾದ ಗುಣವಂತನಾಯರಿ,ಸಂತೋಷ್ ದೇವಾಡಿಗ, ಪ್ರಕಾಶ್ ನಾಯರಿ, ಶಾಂತಾದಿನೇಶ್ ಪೂಜಾರಿ, ಸೇರಿದಂತೆ ಸಂಘದ ವ್ಯಾಪ್ತಿಯ ವಿವಿಧ ಗಣ್ಯರು ಹಾಗೂ ಸದಸ್ಯರು ಉಪಸ್ಥಿತರಿದ್ದರು

Swarna- add
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments