HomeFresh Newsಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂಸೇವಕರ ತರಬೇತಿ ಕಾರ್ಯಾಗಾರ

ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂಸೇವಕರ ತರಬೇತಿ ಕಾರ್ಯಾಗಾರ

ಪುತ್ತೂರು : ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂಸೇವಕರ ತರಬೇತಿ ಕಾರ್ಯಗಾರ ವಿಶ್ವಕರ್ಮ ಸಮುದಾಯ ಭವನ ಬೊಳ್ವರುಲ್ಲಿ ನಡೆಯಿತು.

ಶೌರ್ಯ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಯ ತಂಡದ ಕೆಲಸವು ಸೇವಾ ಮನೋಭಾವದಿಂದ ಕೂಡಿದ್ದು,ಯಾವುದೇ ಕೆಲಸಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡು ಸದಾ ಸೇವೆಗೆ ಸಿದ್ದ ಎನ್ನುವ ಭಾವನೆಯಿಂದ ದುಡಿಯುತ್ತಿರುವ ಸದಸ್ಯರ ಶಕ್ತಿಯನ್ನು ಮೆಚ್ಚುವಂತದ್ದು,. ತಾವು ಮಾಡುವ ಈ ಸೇವೆಯು ದೇಶಸೇವೆಗೆ ಸಮಾನವಾದದು, ಸೈನಿಕನು ಗಡಿಯನ್ನು ರಕ್ಷಿಸಿದರೆ ಸೇವಾ ಮನೋಭಾವವನ್ನು ಹೊಂದಿರುವ ಶೌರ್ಯ ತಂಡದ ಸದಸ್ಯರು ತಮ್ಮ ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ತಮ್ಮಸೇವೆಯ ಮೂಲಕ ಸಮಾಜವನ್ನು ಸರಿಪಡಿಸುತ್ತಿದ್ದೀರಿ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಕಮಾಂಡರ್ ಶಾಂತಿಲಾಲ್ ಜಟಿಯ ಹೇಳಿದರು.

ಗ್ರಾಮಾಭಿವೃದ್ಧಿ ಯೋಜನೆ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್ ರವರು ಕಾರ್ಯಕ್ರಮ ಉದ್ಘಾಟಿಸಿ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮ ರಾಜ್ಯಾದ್ಯಂತ 10000 ಸ್ವಯಂ ಸೇವಕರನ್ನು ಹೊಂದಿರುವ ಬಲಿಷ್ಟ ಸಂಘಟನೆ ಆಗಿದೆ, ವಿಪತು ಸಂದರ್ಭದಲ್ಲಿ ತನ್ನದೇ ಸೇವೆ ನೀಡುತ್ತಾ ಬಂದಿದೆ ಎಂದರು

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಪದ್ಮನಾಭ ಶೆಟ್ಟಿ ಅಧ್ಯಕ್ಷರು ಜಿಲ್ಲಾ ಜನ ಜಾಗೃತಿ ವೇದಿಕೆ ದಕ್ಷಿಣ ಕನ್ನಡ, ಶ್ರೀ ಸಾಜಾ ರಾಧಾಕೃಷ್ಣ ಆಳ್ವ ಮಾಜಿ ರಾಜ್ಯಾಧ್ಯಕ್ಷರು ಜನಜಾಗೃತಿ ವೇದಿಕೆ, ಶ್ರೀ ಸತೀಶ್ ನಾಯ್ಕ ಅಧ್ಯಕ್ಷರು ಜನಜಾಗೃತಿ ವೇದಿಕೆ ಪುತ್ತೂರು ತಾಲೂಕು ಉಪಸ್ಥಿತರಿದ್ದು ಶುಭ ಹಾರೈಸಿದರು.

ವೇದಿಕೆಯಲ್ಲಿ ಸುಳ್ಯ ತಾಲೂಕು ಯೋಜನಾಧಿಕಾರಿ ಶ್ರೀ ಮಾಧವ ಗೌಡ, ಕಡಬ ತಾಲೂಕು ಯೋಜನಾಧಿಕಾರಿ ಶ್ರೀ ಪ್ರಕಾಶ್ ಕುಮಾರ್, ಜನಜಾಗೃತಿ ಮೇಲ್ವಿಚಾರಕ ಶ್ರೀ ನಿತೇಶ್ ಕೆ, ಮಾಸ್ಟರ್ ಕ್ಯಾಪ್ಟನ್ ಗಳಾದ ಜಯರಾಮ್ ಪಿ ಜಿ, ಸತೀಶ್ ನಾಲ್ಕೂರು, ಭವಾನಿ ಶಂಕರ, ಮನೋಜ್ ರವರು ಉಪಸ್ಥಿತರಿದ್ದರು.

ಉದ್ಘಾಟನಾ ಸಭಾ ಕಾರ್ಯಕ್ರಮದ ಬಳಿಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಾದ ಸುಭಾಷ್ ಶಿಂಧೆ ನೇತೃತ್ವದ ತಂಡದಿಂದ ತುರ್ತು ಸಂದರ್ಭದಲ್ಲಿ ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಪ್ರಾತ್ಯಕ್ಷತೆಗಳ ಮೂಲಕ ತರಬೇತಿ ನೀಡಿದರು.

ಈ ಸಂದರ್ಭದಲ್ಲಿ ಸುಳ್ಯ ಪುತ್ತೂರು ಕಡಬ ಯೋಜನಾ ಕಚೇರಿ ವ್ಯಾಪ್ತಿಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಮಾಸ್ಟರ್ ಹಾಗೂ ಕ್ಯಾಪ್ಟನ್ ಗಳನ್ನು ಆಯ್ಕೆ ಮಾಡಲಾಯಿತು

ಶೌರ್ಯ ಕಾರ್ಯಕ್ರಮ ಯೋಜನಾಧಿಕಾರಿ ಶ್ರೀ ಜೈವಂತ್ ಪಟಗಾರ ಪ್ರಸ್ತಾವಿಕ ಮಾತುಗಳನ್ನಡಿದರು,

ಪುತ್ತೂರು ಯೋಜನಾಧಿಕಾರಿ ಶಶಿಧರ್ ಸ್ವಾಗತಿಸಿ, ಜನಜಾಗೃತಿ ಯೋಜನಾಧಿಕಾರಿ ಶ್ರೀ ಗಣೇಶ್ ಆಚಾರ್ಯ ವಂದಿಸಿದರು. ಮೇಲ್ವಿಚಾರಕ ಶ್ರೀ ಹರೀಶ್ ಕಾರ್ಯಕ್ರಮ ನಿರೂಪಿಸಿದರು, ಜ್ಞಾನವಿಕಾಸ ಸಮನ್ವಧಿಕಾರಿ ಕು. ಕಾವ್ಯ ಪ್ರಾರ್ಥಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಪುತ್ತೂರು , ಸುಳ್ಯ, ಕಡಬ ತಾಲೂಕು ಶೌರ್ಯ ತಂಡದ ಸ್ವಯಂ ಸೇವಕರು ಉಪಸ್ಥಿತರಿದ್ದರು..

Swarna- add
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments