HomeFresh Newsಪೆರ್ಡೂರು: ರೆಸಾರ್ಟ್‌ನಲ್ಲಿ ಅಂದರ್ ಬಾಹರ್ ಜುಗಾರಿ: 26 ಮಂದಿ ಸೆರೆ

ಪೆರ್ಡೂರು: ರೆಸಾರ್ಟ್‌ನಲ್ಲಿ ಅಂದರ್ ಬಾಹರ್ ಜುಗಾರಿ: 26 ಮಂದಿ ಸೆರೆ

ಪೆರ್ಡೂರು ಗ್ರಾಮದ ಪುತ್ತಿಗೆ ಸ್ವರ್ಣ ಗ್ರೀನ್ ವ್ಯಾಲಿ ರೆಸಾರ್ಟ್‌ನ ರೂಮ್‌ನಲ್ಲಿ ಜು.7ರಂದು ರಾತ್ರಿ ಅಂದರ್-ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ 26 ಮಂದಿಯನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ಉಳಿಯಾರುಗೋಳಿಯ ಸತೀಶ (49), ಮೂಡಬಿದ್ರೆಯ ಅಕ್ಷಯ (31), ಲೋಹಿತ್, ಕಾಪುವಿನ ದಿನೇಶ, ಬೆಳಪುವಿನ ಮಾಧವ ಪೂಜಾರಿ, ಕಾಪುವಿನ ಪ್ರಶಾಂತ, ಅಕ್ಷಯ, ದಿನೇಶ, ಭರತ್, ಅರುಣ, ರೋಶನ್, ಯಾದವ್, ರಂಜಿತ್, ಮನಿಷ, ಪೃಥ್ವಿನ್, ಶಿವ, ದೀಪಕ್, ಕೃಷ್ಣ, ವಿತೇಶ, ಚರಣ್, ಕಣಜಾರಿನ ಸಂತೋಷ, ಉಚ್ಚಿಲದ ಶಿವ, ಶಿರ್ವದ ಅಬ್ದುಲ್ ಹಮೀದ್, ಹರೋನ್, ಉಡುಪಿಯ ಅಶೋಕ, ಶೈಲೇಶ ಬಂಧಿತ ಆರೋಪಿಗಳು.

ಇವರಿಂದ 1,31,630 ರೂ. ನಗದು, ಒಟ್ಟು 16.50 ಲಕ್ಷ ರೂ. ಮೌಲ್ಯದ 25 ಮೊಬೈಲ್ ಫೋನುಗಳು, ಐದು ಕಾರು, ಮೂರು ಬೈಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತಿಗೆ ಸ್ವರ್ಣ ಗ್ರೀನ್ ವ್ಯಾಲಿ ರೆಸಾರ್ಟ್‌ನ ಪರವಾನಿಗೆ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ಕೆ. ಹಾಗೂ ಪ್ರಭಾರ ಡಿವೈಎಸ್ಪಿ ವಿಜಯಪ್ರಸಾದ್ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಗೋಪೀಕೃಷ್ಣ ಮಾರ್ಗದರ್ಶನದಲ್ಲಿ ಹಿರಿಯಡ್ಕ ಎಸ್ಸೈಗಳಾದ ಪುನೀತ್ ಕುಮಾರ್, ವಿಠ್ಠಲ ಮಲವಡಕರ ಹಾಗೂ ಸಿಬ್ಬಂದಿ ಪ್ರವೀಣ್ ರೈ, ಪ್ರವೀಣ್ ಶೆಟ್ಟಿ, ಯತೀಶ, ಕೃಷ್ಣ ಪೂಜಾರಿ, ಉಲ್ಲಾಸ್, ಚನ್ನೇಶ, ಕಾರ್ತಿಕ್, ಚಾಲಕ ಶಾಂತರಾಮ್ ಶೆಟ್ಟಿ ಈ ಕಾರ್ಯಾಚರಣೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments