ಮಂಗಳೂರು : ದ.ಕ.ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕ್ಕರಣೆ ಪ್ರಗತಿಯಲ್ಲಿದ್ದು, 18,03,766 ಮತದಾರರ ಪೈಕಿ ಜು.19ರವರೆಗೆ 18,03,575 ಎನ್ಯುಮರೇಶನ್ ಫಾರ್ಮ್ ಹಂಚಿಕೆ ಮಾಡಲಾಗಿದೆ. 9,93,147 ಫಾರ್ಮ್‌ಗಳನ್ನು ಡಿಜಿಟೈಸ್ ಮಾಡಲಾಗಿದೆ.
ವಿಧಾನಸಭಾ ಕ್ಷೇತ್ರಗಳಾದ ಬೆಳ್ತಂಗಡಿ-1,43,697, ಮೂಡುಬಿದಿರೆ-1,25,028, ಮಂಗಳೂರು ನಗರ ಉತ್ತರ-1,26,346, ಮಂಗಳೂರು ನಗರ ದಕ್ಷಿಣ-1,28,809, ಮಂಗಳೂರು-1,55,497, ಬಂಟ್ವಾಳ-1,28,708, ಪುತ್ತೂರು-1,33,645, ಸುಳ್ಯ- 1,47,770 ಡಿಜಿಟೈಸ್ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

