ಮೂಡುಬಿದಿರೆ : ರಾ. ಹೆದ್ದಾರಿಯ ನಿಮಾ೯ಣ ಹಂತದಲ್ಲಿರುವ ಕಾಮಗಾರಿಯಿಂದಾಗಿ ರಸ್ತೆಯ ತಡೆಗೋಡೆಯು ಮಗುಚಿ ಬೀಳುವ ಹಂತದಲ್ಲಿದೆ ಎಂದು ಪುತ್ತಿಗೆ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಯರ್ ಪುಂಡು ಬಳಿ ಹಾದು ಹೋಗುವ ರಾ. ಹೆದ್ದಾರಿಯ ಕಾಮಗಾರಿಯು ಸಮಪ೯ಕ ರೀತಿಯಲ್ಲಿ ನಡೆಯುತ್ತಿಲ್ಲ. ಈ ಅವೈಜ್ಞಾನಿಕ ಕಾಮಗಾರಿಯ ಪರಿಣಾಮವಾಗಿ ಇಪ್ಪತ್ತು ದಿನಗಳ ಹಿಂದೆ ಇದೇ ರಸ್ತೆಯ ನೆಲ್ಲಿಗುಡ್ಡೆಯಲ್ಲಿ ತಡೆಗೋಡೆ ಕುಸಿತಗೊಂಡಿತ್ತು.

ಇದೀಗ ನಿರಂತರ ಸುರಿಯುತ್ತಿರುವ ಮಳೆಯ ಪರಿಣಾಮ ಗುಡ್ಡದ ಮಣ್ಣು ಜರಿದು ರಸ್ತೆ ಬದಿಯಲ್ಲಿ ನಿರ್ಮಿಸಿರುವ ತಡೆಗೋಡೆಯ ಮೇಲೆ ಒತ್ತಡ ಬಿದ್ದು ತಡೆಗೋಡೆ ಕುಸಿಯುವ ಹಂತದಲ್ಲಿದ್ದು ಅನಾಹುತ ಸಂಭವಿಸುವ ಮೊದಲೇ ಸಂಬಂಧಪಟ್ಟ ಅಧಿಕಾರಿಗಳು ಸುರಕ್ಷತಾ ಕ್ರಮಗಳನ್ನು ಕೈಗೊಂಡರೆ ಉತ್ತಮ.

ಇದಲ್ಲದೆ ಬೆಳ್ಮಣ್ ಗೆ ಹೋಗುವ ರಸ್ತೆಯ ಬದಿಯನ್ನು ಕಾಮಗಾರಿ ನಡೆಸುವ ಸಂದಭ೯ದಲ್ಲಿ ಎತ್ತರ ಮಾಡಿರುವುದರಿಂದ 40 ಮನೆಗಳಿಗೆ ಹೋಗಲು ದಾರಿ ಇಲ್ಲದಂತ್ತಾಗಿದೆ ಈ ಎಂದು ಆರೋಪಿಸಿದ ಗ್ರಾಮಸ್ಥರಾದ ವಾಸುದೇವ ನಾಯಕ್ ಅವರು ಸಮಪ೯ಕವಾಗಿ ಕಾಮಗಾರಿ ನಡೆಸದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.


