ಕರಾವಳಿ ಕರ್ನಾಟಕದಲ್ಲೇ ಮೊದಲ ಬಾರಿಗೆ ಅಪರೂಪದ ಜನ್ಮಜಾತ ಹೃದಯದ ಕಾಯಿಲೆಯಾದ ಸೈನಸ್ ವೆನೋಸಸ್ ಏಟ್ರಿಯಲ್ ಸೆಪ್ಟಲ್ ಡಿಫೆಕ್ಟ್ (Sinus Venosus Atrial Septal Defect – ASD)ಗೆ ಅತ್ಯಾಧುನಿಕ ಟ್ರಾನ್ಸ್ಕ್ಯಾಥೆಟರ್ (ಪಿನ್-ಹೋಲ್) ವಿಧಾನದ ಮೂಲಕ ಯಶಸ್ವಿ ಚಿಕಿತ್ಸೆ ನೀಡುವ ಮೂಲಕ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಮಂಗಳೂರು ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ.
ಈ ಕುರಿತು ಮಾಹಿತಿ ನೀಡಿದ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ.ಪ್ರಶಾಂತ್ ಮಾರ್ಲ, 52 ವರ್ಷದ ವ್ಯಕ್ತಿಯೊಬ್ಬರು ಉಸಿರಾಟದ ತೊಂದರೆ ಹಾಗೂ ತೀವ್ರ ಆಯಾಸದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಸಮಗ್ರ ತಪಾಸಣೆಯ ವೇಳೆ ಅವರಿಗೆ ಅಪರೂಪದ ಜನ್ಮಜಾತ ಹೃದಯದ ದೋಷವಾದ ಸೈನಸ್ ವೆನೋಸಸ್ ASD ಇರುವುದು ಪತ್ತೆಯಾಯಿತು ಎಂದು ತಿಳಿಸಿದರು.
ಈ ಕಾಯಿಲೆಯಲ್ಲಿ ಹೃದಯದ ಮೇಲಿನ ಎರಡು ಕೋಣೆಗಳ ನಡುವೆ ದೊಡ್ಡ ರಂಧ್ರವಿರುವುದರ ಜೊತೆಗೆ ಶ್ವಾಸಕೋಶದ ರಕ್ತನಾಳಗಳ ಅಸಹಜ ಸಂಪರ್ಕವೂ ಕಂಡುಬರುತ್ತದೆ. ಸಾಮಾನ್ಯವಾಗಿ ಇಂತಹ ಸಂಕೀರ್ಣ ಸಮಸ್ಯೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯೇ ಚಿಕಿತ್ಸೆ ಆಗಿರುತ್ತದೆ.
ಆದರೆ, ರೋಗಿಯ ಆರೋಗ್ಯ ಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿದ ನಂತರ ಆಸ್ಪತ್ರೆಯ ಹೃದ್ರೋಗ ತಜ್ಞರ ತಂಡ ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಬದಲಾಗಿ ಅತ್ಯಾಧುನಿಕ ಟ್ರಾನ್ಸ್ಕ್ಯಾಥೆಟರ್ (ಪಿನ್-ಹೋಲ್) ವಿಧಾನವನ್ನು ಆಯ್ಕೆ ಮಾಡಿತು.
ಚಿಕಿತ್ಸೆಯ ವೇಳೆ ರೋಗಿಯ ಬಲ ಕಾಲಿನ ರಕ್ತನಾಳದಲ್ಲಿ ಸಣ್ಣ ರಂಧ್ರದ ಮೂಲಕ ಕ್ಯಾಥೆಟರ್ ಅನ್ನು ಹೃದಯದವರೆಗೆ ತಲುಪಿಸಿ, ಅತ್ಯಾಧುನಿಕ ಕವರ್ಡ್ ಸ್ಟೆಂಟ್ (Covered Stent) ಅನ್ನು ಯಶಸ್ವಿಯಾಗಿ ಅಳವಡಿಸುವ ಮೂಲಕ ಹೃದಯದ ದೋಷವನ್ನು ಸರಿಪಡಿಸಲಾಯಿತು. ಈ ವಿಧಾನದಿಂದ ರೋಗಿಗೆ ಕಡಿಮೆ ನೋವು, ಕಡಿಮೆ ರಕ್ತಸ್ರಾವ, ಶೀಘ್ರ ಚೇತರಿಕೆ, ಆಸ್ಪತ್ರೆಯಲ್ಲಿ ಕಡಿಮೆ ದಿನಗಳ ವಾಸ ಹಾಗೂ ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಅಪಾಯಗಳಿಂದ ಮುಕ್ತಿ ದೊರಕಿದೆ.
ಈ ಸಂಕೀರ್ಣ ಚಿಕಿತ್ಸೆಯನ್ನು ಮುಖ್ಯ ಮಕ್ಕಳ ಇಂಟರ್ವೆನ್ಷನಲ್ ಹೃದ್ರೋಗ ತಜ್ಞರಾದ ಡಾ. ಪ್ರೇಮ್ ಆಳ್ವ ಹಾಗೂ ಹಿರಿಯ ಇಂಟರ್ವೆನ್ಷನಲ್ ಹೃದ್ರೋಗ ತಜ್ಞರಾದ ಡಾ. ಪ್ರವೀಣ್ ಜೆ. ಶೆಟ್ಟಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿಸಲಾಯಿತು.
ಈ ಕುರಿತು ಮಾಹಿತಿ ನೀಡಿದ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ.ಪ್ರಶಾಂತ್ ಮಾರ್ಲ, 52 ವರ್ಷದ ವ್ಯಕ್ತಿಯೊಬ್ಬರು ಉಸಿರಾಟದ ತೊಂದರೆ ಹಾಗೂ ತೀವ್ರ ಆಯಾಸದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಸಮಗ್ರ ತಪಾಸಣೆಯ ವೇಳೆ ಅವರಿಗೆ ಅಪರೂಪದ ಜನ್ಮಜಾತ ಹೃದಯದ ದೋಷವಾದ ಸೈನಸ್ ವೆನೋಸಸ್ ASD ಇರುವುದು ಪತ್ತೆಯಾಯಿತು. ಕರಾವಳಿ ಕರ್ನಾಟಕದ ಜನರಿಗೆ ವಿಶ್ವಮಟ್ಟದ ಅತ್ಯಾಧುನಿಕ ಹೃದಯ ಚಿಕಿತ್ಸೆಯನ್ನು ಸ್ಥಳೀಯವಾಗಿಯೇ ಒದಗಿಸುವ ಎ.ಜೆ. ಆಸ್ಪತ್ರೆಯ ಬದ್ಧತೆಗೆ ಈ ಸಾಧನೆ ಸಾಕ್ಷಿಯಾಗಿದೆ. ಇಂತಹ ಸಂಕೀರ್ಣ ಜನ್ಮಜಾತ ಹೃದಯದ ಕಾಯಿಲೆಗಳಿಗೆ ಇನ್ನು ಮುಂದೆ ದೂರದ ನಗರಗಳಿಗೆ ತೆರಳುವ ಅಗತ್ಯವಿಲ್ಲದೆ ಮಂಗಳೂರಿನಲ್ಲಿಯೇ ಅತ್ಯಾಧುನಿಕ ಚಿಕಿತ್ಸೆ ಪಡೆಯಬಹುದು ಎಂದು ಹೇಳಿದರು.
ಈ ಕಾಯಿಲೆಯಲ್ಲಿ ಹೃದಯದ ಮೇಲಿನ ಎರಡು ಕೋಣೆಗಳ ನಡುವೆ ದೊಡ್ಡ ರಂಧ್ರವಿರುವುದರ ಜೊತೆಗೆ ಶ್ವಾಸಕೋಶದ ರಕ್ತನಾಳಗಳ ಅಸಹಜ ಸಂಪರ್ಕವೂ ಕಂಡುಬರುತ್ತದೆ. ಸಾಮಾನ್ಯವಾಗಿ ಇಂತಹ ಸಂಕೀರ್ಣ ಸಮಸ್ಯೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯೇ ಚಿಕಿತ್ಸೆ ಆಗಿರುತ್ತದೆ.
ಆದರೆ, ರೋಗಿಯ ಆರೋಗ್ಯ ಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿದ ನಂತರ ಆಸ್ಪತ್ರೆಯ ಹೃದ್ರೋಗ ತಜ್ಞರ ತಂಡ ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಬದಲಾಗಿ ಅತ್ಯಾಧುನಿಕ ಟ್ರಾನ್ಸ್ಕ್ಯಾಥೆಟರ್ (ಪಿನ್-ಹೋಲ್) ವಿಧಾನವನ್ನು ಆಯ್ಕೆ ಮಾಡಿತು.
ಚಿಕಿತ್ಸೆಯ ವೇಳೆ ರೋಗಿಯ ಬಲ ಕಾಲಿನ ರಕ್ತನಾಳದಲ್ಲಿ ಸಣ್ಣ ರಂಧ್ರದ ಮೂಲಕ ಕ್ಯಾಥೆಟರ್ ಅನ್ನು ಹೃದಯದವರೆಗೆ ತಲುಪಿಸಿ, ಅತ್ಯಾಧುನಿಕ ಕವರ್ಡ್ ಸ್ಟೆಂಟ್ (Covered Stent) ಅನ್ನು ಯಶಸ್ವಿಯಾಗಿ ಅಳವಡಿಸುವ ಮೂಲಕ ಹೃದಯದ ದೋಷವನ್ನು ಸರಿಪಡಿಸಲಾಯಿತು. ಈ ವಿಧಾನದಿಂದ ರೋಗಿಗೆ ಕಡಿಮೆ ನೋವು, ಕಡಿಮೆ ರಕ್ತಸ್ರಾವ, ಶೀಘ್ರ ಚೇತರಿಕೆ, ಆಸ್ಪತ್ರೆಯಲ್ಲಿ ಕಡಿಮೆ ದಿನಗಳ ವಾಸ ಹಾಗೂ ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಅಪಾಯಗಳಿಂದ ಮುಕ್ತಿ ದೊರಕಿದೆ.
ಈ ಸಂಕೀರ್ಣ ಚಿಕಿತ್ಸೆಯನ್ನು ಮುಖ್ಯ ಮಕ್ಕಳ ಇಂಟರ್ವೆನ್ಷನಲ್ ಹೃದ್ರೋಗ ತಜ್ಞರಾದ ಡಾ. ಪ್ರೇಮ್ ಆಳ್ವ ಹಾಗೂ ಹಿರಿಯ ಇಂಟರ್ವೆನ್ಷನಲ್ ಹೃದ್ರೋಗ ತಜ್ಞರಾದ ಡಾ. ಪ್ರವೀಣ್ ಜೆ. ಶೆಟ್ಟಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿಸಲಾಯಿತು.
ಶಸ್ತ್ರಚಿಕಿತ್ಸೆಯ ವೇಳೆ ಅರಿವಳಿಕೆ ಹಾಗೂ ಉಸಿರಾಟ ನಿರ್ವಹಣೆಯನ್ನು ಡಾ. ಗುರುರಾಜ್ ತಂತ್ರಿ ಮತ್ತು ಡಾ. ಕಾರ್ತಿಕ್ ಸಮರ್ಥವಾಗಿ ನಿರ್ವಹಿಸಿದರು. ಡಾ. ಅಶೋಕ್ ಅವರು ಟ್ರಾನ್ಸ್-ಈಸೋಫೇಜಿಯಲ್ ಎಕೋಕಾರ್ಡಿಯೋಗ್ರಫಿ (TEE) ಮೂಲಕ ನಿಖರವಾದ ಚಿತ್ರಣ ಒದಗಿಸಿ, ಸ್ಟೆಂಟ್ ಅನ್ನು ಸರಿಯಾದ ಸ್ಥಾನದಲ್ಲಿ ಅಳವಡಿಸಲು ಪ್ರಮುಖ ಪಾತ್ರವಹಿಸಿದರು. ಹೃದ್ರೋಗ ತಜ್ಞರು, ಅರಿವಳಿಕೆ ತಜ್ಞರು, ಇಮೇಜಿಂಗ್ ತಜ್ಞರು, ಕ್ಯಾಥ್ ಲ್ಯಾಬ್ ಸಿಬ್ಬಂದಿ, ನರ್ಸಿಂಗ್ ತಂಡ ಹಾಗೂ ಇತರ ವೈದ್ಯಕೀಯ ಸಿಬ್ಬಂದಿಯ ಸಮನ್ವಯದ ಕಾರ್ಯದಿಂದ ಈ ಚಿಕಿತ್ಸೆ ಯಶಸ್ವಿಯಾಯಿತು.
ಚಿಕಿತ್ಸೆಯ 45 ದಿನಗಳ ಬಳಿಕ ನಡೆದ ಮರುಪರಿಶೀಲನೆಯಲ್ಲಿ ರೋಗಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ತಮ್ಮ ದೈನಂದಿನ ಚಟುವಟಿಕೆಗಳಿಗೆ ಮರಳಿದ್ದಾರೆ. ಯಾವುದೇ ತೊಂದರೆಯಿಲ್ಲದೆ ಆರೋಗ್ಯಕರ ಮತ್ತು ಸಾಮಾನ್ಯ ಜೀವನ ನಡೆಸುತ್ತಿದ್ದಾರೆ.