HomeFresh Newsಬೋಳ ವೀರಮಣಿ ಕಾಳಗ’ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ

ಬೋಳ ವೀರಮಣಿ ಕಾಳಗ’ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ

ಬೋಳ: ಬಾಲ್ಯದಲ್ಲಿಯೇ ವಿದ್ಯಾರ್ಥಿಗಳಿಗೆ ಯಕ್ಷಗಾನದ ಮೂಲಕ ಶಿಕ್ಷಣ ಮತ್ತು ಸಂಸ್ಕಾರ ನೀಡಿದರೆ ಮಕ್ಕಳು ಕೆಟ್ಟ ಕೆಲಸಗಳಿಗೆ, ತಪ್ಪು ದಾರಿಗೆ ಹೋಗುವುದಿಲ್ಲ ಎಂದು ಶ್ರೀಚಕ್ರ ಕಂಟೈನರ್ಸ್ ಮತ್ತು ಲೈಟ್ ಈಟ್ಜ್ ಕಂಪನಿಗಳ ಮ್ಯಾನೇಜಿಂಗ್ ಡೈರೆಕ್ಟರ್ ಉದಯ ಶೆಟ್ಟಿ ಗುಂಡುಕಲ್ಲು ಹೇಳಿದರು.


ಬೋಳ ಯಕ್ಷಾಕ್ಷರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಅಶ್ವತ್ಥ ನಾರಾಯಣ ಭಜನಾ ಮಂಡಳಿ, ಬರಬೈಲು–ಬೋಳ ಇವರ ಆಶ್ರಯದಲ್ಲಿ ನಡೆದ ‘ವೀರಮಣಿ ಕಾಳಗ’ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಕ್ಷಗಾನ ಹಾಗೂ ಸಂಘಟನಾ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಂಡರೆ ಅವರು ತಪ್ಪು ದಾರಿಗೆ ಹೋಗದೆ, ಶಿಸ್ತು ಮತ್ತು ಸಂಸ್ಕಾರ ಹೊಂದಿದ ಸುಸಂಸ್ಕೃತ ನಾಗರಿಕರಾಗಿ ಬೆಳೆಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಬೋಳ ಸದಾಶಿವ ಶೆಟ್ಟಿ, ಉದಯ ಶೆಟ್ಟಿ ಮೂಡುಮನೆ, ಜಗನ್ನಾಥ ಶೆಟ್ಟಿ ಕಲ್ಲಬೆಟ್ಟು, ಅಶ್ವತ್ಥ ನಾರಾಯಣ ಭಜನಾ ಮಂಡಳಿಯ ಅಧ್ಯಕ್ಷ ಜಯರಾಮ ಶೆಟ್ಟಿ ಪೊಸರ್ಮ–ಪರಾಡಿ, ನಿವೃತ್ತ ಶಿಕ್ಷಕ ತುಕಾರಾಮ ಶೆಟ್ಟಿ, ಸತೀಶ ಶೆಟ್ಟಿ ಪೆಜತಬೆಟ್ಟು, ಅಕ್ಷಯ ಅಡ್ಯಂತಾಯ, ವಾಸುದೇವ ಹೆಬ್ಬಾರ್, ದೇವದಾಸ್ ಕಾಮತ್, ವಿಶ್ವನಾಥ ಶೆಟ್ಟಿ, ಬಿ.ಎಸ್. ಪ್ರಕಾಶ್ ಆಚಾರ್ಯ, ಸತೀಶ ಪ್ರಭು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಯಕ್ಷಗಾನ ಕಲಾವಿದರಾದ ದೇವಿಪ್ರಸಾದ್ ಆಳ್ವ ತಲಪಾಡಿ, ಯೋಗೀಶ ಆಚಾರ್ಯ ಉಳೆಪಾಡಿ, ಅಶೋಕ ಆಚಾರ್ಯ ಉಳೆಪಾಡಿ, ಜಬ್ಬಾರ್ ಸಮೊ ಸಂಪಾಜೆ, ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಸದಾಶಿವ ಆಳ್ವ ತಲಪಾಡಿ, ಸತೀಶ ಮಾಣಿ ಹಾಗೂ ಚಂದ್ ರವಿಚಂದ್ರ ಬಂಜಾರಕಟ್ಟೆ ಭಾಗವಹಿಸಿದ್ದರು.
ಬೋಳ ಸುಧಾಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಅಶ್ವತ್ಥ ನಾರಾಯಣ ಭಜನಾ ಮಂಡಳಿಯ ಕಾರ್ಯದರ್ಶಿ ಸತೀಶ ಶೆಟ್ಟಿ ಅಗ್ಗ್ಯೋಟ್ಟು ಧನ್ಯವಾದ ಸಲ್ಲಿಸಿದರು.

Home interiors
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments