Home Archive by category KARKALA

ತಿರುಪತಿಯ ಖ್ಯಾತಿಯ ವೆಂಕಟರಮಣ ದೇವಸ್ಥಾನ :ಲಕ್ಷದೀಪೋತ್ಸವ ಸಮಾಪನ

ಕಾರ್ಕಳ ತಿರುಪತಿ ಖ್ಯಾತಿಯ ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಂಭ್ರಮದ ದೀಪುತ್ಸವ ನಡೆದು ಮಂಗಳವಾರ ಉತ್ಸವ ಭಕ್ತಿ ಭಾವಗಳಿಂದ ನಡೆದು ಲಕ್ಷ ದೀಪೋತ್ಸವ ಸಮಾಪನ ಗೊಂಡಿತು. ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಬಳಿಕ ವೆಂಕಟರಮಣ ಮತ್ತು ಶ್ರೀನಿವಾಸ್ ದೇವರುಗಳನ್ನು ವಜ್ರತಟ್ಟೆಯಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ

ಸತೀಶ್ ಜಾರಕಿಹೊಳಿ ಹೇಳಿಕೆ ವಿರುದ್ಧ ಕಾರ್ಕಳದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ

ಕಾರ್ಕಳ: ಕಾಂಗ್ರೆಸ್‍ನ ಕುಟಿಲ ರಾಜಕೀಯದ ಪರಮಾವಧಿಯೆ ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳೆ ಹಿಂದೂ ಶಬ್ದದ ಅವಹೇಳನಕಾರಿ ಹೇಳಿಕೆ. ಕಾಂಗ್ರೆಸ್‍ನ ಹೀನ ರಾಜಕಾರಣದ ಬಗ್ಗೆ ಪ್ರತಿ ಹಿಂದೂವಿನಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದ್ದು ಹಿಂದುತ್ವ ಪ್ರತಿ ಹಿಂದೂ ಜೀವ ತ್ಯಾಗಕ್ಕೂ ಸಿದ್ಧರಿರಬೇಕಿದೆ ಎಂದು ಗೆರುಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಮನಿರಾಜ ಶೆಟ್ಟಿ ಹೇಳಿದರು. ಬಿಜೆಪಿ ಕಾರ್ಕಳ ಇದರ ವತಿಯಿಂದ ಕಾಂಗ್ರೆಸ್ ಸತೀಶ್ ಜಾರಕಿಹೊಳಿ ವಿರುದ್ಧ ಬಸ್

ಕಾರ್ಕಳ: ಚಂದ್ರ ಗ್ರಹಣ ಭಾಗಶಃ ಗೋಚರ

ಕಾರ್ಕಳ: ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ಚಂದ್ರ ಗ್ರಹಣದ ಭಾಗಶಃ ಗೋಚರವಾಯಿತು . ಚಂದ್ರಗ್ರಹಣ ಮೋಕ್ಷಕಾಲದ ಬಳಿಕ ಕಾರ್ಕಳದ ಪ್ರಮುಖ ದೇವಾಲಯಗಳಲ್ಲಿಗರ್ಭಗುಡಿ ಸ್ವಚ್ಚ ಗೊಳಿಸಿ ಪೂಜಾ ವಿಧಿವಿಧಾನಗಳು ನಡೆದವು. ಕಾರ್ಕಳ ತಾಲೂಕಿನ ಪ್ರಸಿದ್ದ ವೆಂಕಟರಮಣ ದೇವಾಲಯ , ಅನಂತ ಶಯನ ದೇವಾಲಯ, ಮುಖ್ಯಪ್ರಾಣ ದೇವಾಲಯ, ಹಿರ್ಗಾನ ಮಹಾಲಕ್ಷ್ಮಿ ದೇವಸ್ಥಾನ , ಹೆಬ್ರಿಯ ಅನಂತ ಪದ್ಮನಾಭ ದೇವಾಲಯ , ಅಜೆಕಾರು ವಿಷ್ಣುಮೂರ್ತಿ ದೇವಾಲಯಗಳಲ್ಲಿ ಸ್ವಚ್ಚತಾ ಕಾರ್ಯಗಳು ನಡೆದು ದೇವರಿಗೆ

ಕಾರ್ಕಳ : 18 ಸೆನ್ಸ್ ಜಾಗದಲ್ಲಿ ಅನಂತ ಕೃಷ್ಣ ಟ್ರಸ್ಟ್ ಗೋಶಾಲೆ ನಿರ್ಮಾಣ

ಕಾರ್ಕಳ ತಾಲೂಕಿನಲ್ಲಿ ಗೋಪ್ರೇಮಿ ಕುಟುಂಬವೊAದು ಇದ್ದು, ಒಂದೇ ಸೂರಿನಡಿ 116 ದನ ಕರುಗಳನ್ನು ಸಾಕಿ ಸಲುಹುತ್ತಿದ್ದಾರೆ. 18 ಸೆನ್ಸ್ ಜಾಗದಲ್ಲಿ ಅನಂತ ಕೃಷ್ಣ ಟ್ರಸ್ಟ್ ಎಂಬ ಗೋಶಾಲೆಯನ್ನು ನಿರ್ಮಿಸಿ ದನಕರುಗಳ ಪೋಷಣೆ ಮಾಡುತ್ತಿದ್ದಾರೆ. ಆದರೆ ಜಾಗದ ಕೊರತೆಯಿಂದ ದನಕರುಗಳನ್ನು ಸಾಕಲು ತೊಂದರೆ ಅನುಭವಿಸುತ್ತಿದ್ದಾರೆ. ರಾಮ, ಭೀಮ, ಸುಂದರ ಸೀತಾ, ಗೀತಾ ಎಂಬ ಹಲವಾರು ಹೆಸರುಗಳಿರುವ 116 ದನ ಕರುಗಳು ಕೇವಲ 18 ಸೆನ್ಸ್ ಜಾಗದಲ್ಲಿ ಅತಿ ಜಾಗರೂಕತೆಯಿಂದ ಸಾಕುತ್ತಿರುವ

ಕಡಂದಲೆ ಪಾಲಡ್ಕದಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಗ್ರಾಮಸ್ಥರ ವಿರೋಧ

ಮೂಡುಬಿದಿರೆ : ಪಾಲಡ್ಕ ಗ್ರಾ.ಪಂ. ವ್ಯಾಪ್ತಿಯ ಕಡಂದಲೆಯಲ್ಲಿ 400/320 ಕೆ.ವಿ. ವಿದ್ಯುತ್ ಉಪಕೇಂದ್ರಕ್ಕೆ 400 ಕೆ.ವಿ. ಬಹುಮಂಡಲ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ ಮೊದಲಾದ ಕಾಮಗಾರಿಗಳಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪಾಲಡ್ಕ ಪೂಪಾಡಿಕಲ್ಲು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ಪಾಲಡ್ಕ ಗ್ರಾ.ಪಂ. ವಿಶೇಷ ಗ್ರಾಮಸಭೆಯಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಗ್ರಾಮಸ್ಥರ ವಿರೋಧವಿದೆ ಎಂದು ಪಂಚಾಯತ್ ನಿರ್ಣಯ ದಾಖಲಿಸಿದೆ.

ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ನಿರ್ಮಿಸಿದ್ದ ಆಧಾರ ಕಂಬಗಳಿಗೆ ತುಕ್ಕು

ಕಾರ್ಕಳದಲ್ಲಿ 2015ರಲ್ಲಿ ಜರುಗಿದ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಪುರಸಭೆಯ ವತಿಯಿಂದ ಸ್ವಾಗತ ಕಮಾನು ಅಂಚೆ ಇಲಾಖೆಗೆ ಸೇರಿದ ನಿವೇಶನ ಇರಿಸಲಾಗಿದೆ. ಸುಮಾರು ಏಳು ವರ್ಷಗಳು ಕಳೆದರೂ ಕಬ್ಬಿಣದ ಆಧಾರ ಸ್ತಂಭಗಳು ತುಕ್ಕು ಹಿಡಿದು ಹೋಗಿದ್ದು, ತೆರಿಗೆ ಹಣ ಪೋಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಅಶ್ಪಕ್ ಅಹಮ್ಮದ್ ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಶ್ಪಕ್ ಅಹಮ್ಮದ್ ಅವರು, ಸ್ವಾಗತ ಕಮಾನುವಿಗೆ 2 ಲಕ್ಷ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾಗಿತ್ತು.

ಕಾರ್ಕಳ : ಚಾಣಕ್ಯ ಕದೀಮರಿಬ್ಬರ ಸೆರೆ

ಒಡವೆ ಕಳ್ಳತನ ಸಹಿತ ವಾಹನಗಳ ಕಳ್ಳತನ ನಡೆಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಕದೀಮ ಕಳ್ಳರಿಬ್ಬರನ್ನು ಕಾರ್ಕಳ ಪೊಲೀಸ್ ಉಪಾಧೀಕ್ಷರ ಹಾಗೂ ವೃತ ನಿರೀಕ್ಷಕರ ತಂಡ ಬಂಧಿಸಿದೆ. ಬಂಧಿತರ ಮೇಲೆ ರಾಜ್ಯಾದ್ಯಂತ ಬಹಳಷ್ಟು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಮೂಲತಃ ಬಜಪೆ ನಿವಾಸಿ ಇದೀಗ ಮೂಳೂರುಎಸ್.ಎಸ್. ರಸ್ತೆಯ ಶ್ರೀ ಸಾಯಿ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ ವಾಜೀದ್ ಜೆ.(25) ಹಾಗೂ ಉಡುಪಿ ಕಡಿಯಾಳಿ ಆಚಾರ್ಯ ರಸ್ತೆಯ ಬಾಡಿಗೆ ಮನೆ ನಿವಾಸಿ ಶಹನಾಜ್ (32)

ಕಾರ್ಕಳದ ಮಿಯಾರು ಗ್ರಾಮದಲ್ಲಿ ಕೈಗಾರಿಕೆ ಸ್ಥಾಪನೆಗೆ ವಿರೋಧ

ಕಾರ್ಕಳದ ಮಿಯಾರು ಗ್ರಾಮದಲ್ಲಿ ಜಾನ್ ಸಿಎನ್ ಎಸ್‍ಎಲ್ ಆಯಿಲ್ ಮತ್ತು ಶೆಲ್ ಘಟಕ ಪ್ರಾರಂಭಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಕಾರ್ಕಳದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಶೇಕ್ ಶಬ್ಬೀರ್ ಅವರು, ಕೈಗಾರಿಕಾ ಪ್ರದೇಶ ಸ್ಥಾಪಿಸಲು ಯೋಗ್ಯವಲ್ಲದ ಸ್ಥಳ ಇದಾಗಿದೆ. ಕೈಗಾರಿಕೆ ಪ್ರಾಂಗಾಣಕ್ಕೆ ಹೊಂದಿಕೊಂಡು ಸುಮಾರು 450 ಹೆಚ್ಚು ಬಡ ಕುಟುಂಬಗಳ ಗುಡಿಸಲುಗಳಿವೆ. ಕೂಗಳತೆಯ ದೂರದಲ್ಲಿ ಮುರಾಜಿ ದೇಸಾಯಿ ವಸತಿ

ಮಳೆಗೆ ಸಂಪೂರ್ಣವಾಗಿ ಹದಗೆಟ್ಟ ಮುಖ್ಯರಸ್ತೆ : ಚರಂಡಿ ಮೋರಿಗಳಿಗೆ ಕೋಟ್ಯಾಂತರ ರೂಪಾಯಿ ಖರ್ಚು

ಕಾರ್ಕಳ : ಕಳೆದ ಮಾರ್ಚ್ ತಿಂಗಳಲ್ಲಿ ಕಾರ್ಕಳದಲ್ಲಿ ಬಹಳ ಅದ್ದೂರಿಯಾಗಿ ಕಾರ್ಕಳ ಉತ್ಸವ ಜರುಗಿದ್ದು. ಈ ಸಂದರ್ಭದಲ್ಲಿ ಕಾರ್ಕಳ ತಾಲೂಕಿನ ಮುಖ್ಯ ರಸ್ತೆಗಳು, ಚರಂಡಿ ಮೋರಿಗಳಿಗೆ ಕೋಟಿಗಟ್ಟಲೆ ರೂಪಾಯಿಗಳನ್ನು ಖರ್ಚು ಮಾಡಿ ಡಾಮರೀಕರ್ಣ ಮಾಡಲಾಗಿತ್ತು. ಇದೀಗ ಕಾರ್ಕಳದ ಮುಖ್ಯ ರಸ್ತೆಗಳಲ್ಲಿ ಒಳ ಚರಂಡಿಯ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಕಾರ್ಕಳ ಮುಖ್ಯ ರಸ್ತೆಯ ಡಾಮರು ಎದ್ದು ಹೊಂಡಗಳು ಬಿದ್ದು ಪಾದಾಚಾರಿಗಳಿಗೆ ಹಾಗೂ ವಾಹನ ಚಾಲಕರಿಗೆ ಹೋಗುವುದೇ ಒಂದು