ಕಡಬ ತಾಲೂಕು ರಾಮ ಕುಂಜ ಗ್ರಾಮದ ಆತೂರುನ ಉದ್ಯಮಿ ಸಿದ್ಧಿಕ್ ಎಂಬವರ ಮನೆಯಲ್ಲಿನ ಫ್ರಿಡ್ಜ್ ಭೀಕರ ಸ್ಫೋಟ ಗೊಂಡು ಲಕ್ಷಾಂತರ ನಷ್ಟ ಸಂಭವಿಸಿದ್ದು ಇಂದು ಮಧ್ಯಾಹ್ನದ ವೇಳೆ ಘಟನೆ ನಡೆದಿದೆ.
ಸ್ಥಳೀಯ ಯುವಕರಾದ ಅಝೀಝ್ ಹಳ್ಯಾರ, ಅಝೀಝ್ ಪಲ್ತಾಡಿ, ಸಿಹಾಬ್ ಗೋಳಿತ್ತಾಡಿ, ಲತೀಫ್ ನೆಲ್ಯಾಟ್ಟು, ಅನ್ಸಾರ್ ಕುಟೇಲ್ ನೀರಾಜೆ, ಜನಾರ್ದನ ರಾಮಕುಂಜ, ಅಶ್ರಫ್ ಪಟ್ಟೆ, ಖಾದರ್ ಬಿಜತಲಿ, ಫಾರೂಕ್ ಎಲ್ಯoಗ, ಶಂಶಿರ್ ಗೋಳಿತ್ತಾಡಿ, ಫಾರೂಕ್ ಅಮೈ, ನಿಝರ್ ಮೊಟ್ಟೆತಡ್ಕ ಹಾಗೂ ರಝಕ್ ಬೂಮಿಕ ಬಂದು ಬೆಂಕಿ ನಂದಿಸುವಳ್ಳಿ ಸಹಕರಿಸಿದರು.
ಫ್ರಿಡ್ಜ್ ಸ್ಪೋಟಗೊಂಡು ಮನೆಗೆ ಹಾನಿಯಾದ ಘಟನೆ ಆ. 11 ರಂದು ಸಂಜೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಆತೂರಿನಲ್ಲಿ ನಡೆದಿದೆ. ಆತೂರು ನಿವಾಸಿ, ವಿದೇಶದಲ್ಲಿ ಉದ್ಯೋಗದಲ್ಲಿರುವ ಸಿದ್ದೀಕ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಘಟನೆ ವೇಳೆ ಮನೆಯಲ್ಲಿ ಸಿದ್ದೀಕ್ ಅವರ ಪತ್ನಿ ಆರೀಫಾ ಮಾತ್ರ ಇದ್ದು ಅವರು ಅಪಾಯದಿಂದ ಪಾರಾಗಿದ್ದಾರೆ. ಫ್ರೀಡ್ಜ್ ಸ್ಪೋಟಕ್ಕೆ ಮನೆಗೆ ಹಾನಿಯಾಗಿದೆ.

