ಒಡಿಶಾದ ಭುವನೇಶ್ವರದ ಕಾಳಿಂಗ ಕ್ರೀಡಾಂಗಣದಲ್ಲಿ ಆಗಸ್ಟ್ 18 ರಿಂದ 23 ರವರೆಗೆ ನಡೆದ ಪ್ರತಿಷ್ಠಿತ ’52ನೇ ಜೂನಿಯರ್ ನ್ಯಾಷನಲ್ ಅಕ್ವಾಟಿಕ್ಸ್ ಚಾಂಪಿಯನ್ಷಿಪ್ ೨2026’ ರಲ್ಲಿ ಪ್ರಥಮ ವರ್ಷದ ಬಿ.ವೋಕ್ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿನಿ ಎನ್. ಪವನಿ ಸರಯು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ದೇಶದ ನಾನಾ ಭಾಗಗಳಿಂದ ಬಂದಿದ್ದ ಕ್ರೀಡಾಪಟುಗಳೊಂದಿಗೆ ತೀವ್ರ ಪೈಪೋಟಿ ನಡೆಸಿದ ಪವನಿ ಸರಯು, ಈಜು ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಒಟ್ಟು ಮೂರು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ
200 ಮೀಟರ್ ಬ್ರೆಸ್ಟ್ಸ್ಟ್ರೋಕ್ ನಲ್ಲಿ ಬೆಳ್ಳಿ ಪದಕ, 400 ಮೀಟರ್ ಇಂಡಿವಿಜುಯಲ್ ಮೆಡ್ಲೆಯಲ್ಲಿ ಕಂಚಿನ ಪದಕ, 200 ಮೀಟರ್ ಇಂಡಿವಿಜುಯಲ್ ಮೆಡ್ಲೆಯಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಕಾಲೇಜಿನ ಹಿರಿಮೆಯನ್ನು ಎತ್ತಿಹಿಡಿದ ಎನ್. ಪವನಿ ಸರಯು ಅವರ ಈ ಅದ್ಭುತ ಕ್ರೀಡಾ ಸಾಧನೆಗೆ ಸಂತ ಅಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಹಪಾಠಿಗಳು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಮುಂಬರುವ ಸ್ಪರ್ಧೆಗಳಲ್ಲೂ ಅವರು ಇನ್ನಷ್ಟು ಹೆಚ್ಚಿನ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದ್ದಾರೆ.

