ಪಡುಬಿದ್ರಿ:ಪಾದೆಬೆಟ್ಟು ಪದ್ರದಬೆಟ್ಟು ಶ್ರೀ ಭಗವಾನ್ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ದುಬೈಯ ಹೋಟೆಲ್ ಉದ್ಯಮಿಗಳಾದ ಪ್ರಭಳ ನಾರಾಯಣ ಶೆಟ್ಟಿ ಅವರ ಪುತ್ರರಾದ ಶೈಲೇಶ್ ಎನ್. ಶೆಟ್ಟಿ ಹಾಗೂ ವಿನೋದ್ ಎನ್. ಶೆಟ್ಟಿ ಸಹೋದರರು ₹11,11,101 ದೇಣಿಗೆಯನ್ನು ಜೀರ್ಣೋದ್ಧಾರ ಸಮಿತಿಗೆ ಹಸ್ತಾಂತರಿಸಿದರು.
ಸುಮಾರು ₹1.50 ಕೋಟಿ ವೆಚ್ಚದಲ್ಲಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಪ್ರಸ್ತುತ ಕಾಮಗಾರಿ ಪ್ರಗತಿಯಲ್ಲಿದೆ.
ದೇಣಿಗೆಯನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನವೀನಚಂದ್ರ ಜೆ. ಶೆಟ್ಟಿ ಸ್ವೀಕರಿಸಿದರು.
ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಸಹೋದರರು ನೀಡಿದ ಉದಾರ ದೇಣಿಗೆಗೆ ಸಮಿತಿಯ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಜಯ ಶೆಟ್ಟಿ ಪದ್ರ, ಕೋಶಾಧಿಕಾರಿ ರವಿ ಶೆಟ್ಟಿ ಹಾಗೂ ಮುಂಬಯಿ ಸಮಿತಿಯ ಅಧ್ಯಕ್ಷರಾದ ಎನ್.ಸಿ ಶೆಟ್ಟಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.


