HomeFresh Newsಪಡುಬಿದ್ರಿ ಪದ್ರದಬೆಟ್ಟು ಬಬ್ಬು ಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರಕ್ಕೆ ₹10 ಲಕ್ಷ ದೇಣಿಗೆ

ಪಡುಬಿದ್ರಿ ಪದ್ರದಬೆಟ್ಟು ಬಬ್ಬು ಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರಕ್ಕೆ ₹10 ಲಕ್ಷ ದೇಣಿಗೆ

ಪಡುಬಿದ್ರಿ: ಪದ್ರದಬೆಟ್ಟು ಭಗವಾನ್ ಬಬ್ಬು ಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಪಡುಬಿದ್ರಿಯ ಬಗ್ಗಪ್ಪ ಶೆಟ್ಟಿ ಮನೆ ಕುಟುಂಬಸ್ಥರು ₹10 ಲಕ್ಷ ದೇಣಿಗೆ ನೀಡಿದರು.
ದೇಣಿಗೆಯ ಮೊತ್ತವನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀ ನವೀನಚಂದ್ರ ಜೆ. ಶೆಟ್ಟಿ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಜಯ ಶೆಟ್ಟಿ, ಕೋಶಾಧಿಕಾರಿ ರವಿ ಶೆಟ್ಟಿ, ನಾರಾಯಣ ಶೆಟ್ಟಿ, ಪ್ರಭಾಕರ್ ಶೆಟ್ಟಿ, ಸುಂದರ ಶೆಟ್ಟಿ, ಶೈಲೇಶ್ ಶೆಟ್ಟಿ, ವಿನೋದ್ ಶೆಟ್ಟಿ, ಉದಯ ಶೆಟ್ಟಿ, ಎನ್.ಸಿ. ಶೆಟ್ಟಿ (ಮುಂಬೈ), ಸೀತಾರಾಮ್ ಶೆಟ್ಟಿ, ನವೀನ್ ಶೆಟ್ಟಿ, ಪ್ರಾಣಮ್ ಶೆಟ್ಟಿ, ಪ್ರಾಣಮ್ ಗೋಪಾಲ್ ಶೆಟ್ಟಿ, ಸೊಮ್ಮಯ್ಯ, ರಮೇಶ್, ಕೃಷ್ಣ ಶೆಟ್ಟಿ, ಉಮೇಶ್ ಪೂಜಾರಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪದ್ರದಬೆಟ್ಟು ಭಗವಾನ್ ಬಬ್ಬು ಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯವು ಸುಮಾರು ₹1.50 ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದು, ಭಕ್ತರು ಹಾಗೂ ದಾನಿಗಳ ಸಹಕಾರದಿಂದ ಕಾಮಗಾರಿಗಳು ಮುಂದುವರಿಯುತ್ತಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments