ಬೈಂದೂರು ತಗ್ಗರ್ಸೆ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಆಶ್ರಯದಲ್ಲಿ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಮೂರು ದಿನಗಳ ಕಾಲ ಸಂಭ್ರಮ ವಿಜೃಂಭಣೆ ಯಿಂದ ನಡೆಯಿತು .
ಸೆ.14ರಂದು ಗಣೇಶ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಆರಂಭಗೊಂಡ ಉತ್ಸವದಲ್ಲಿ ಕುಣಿತ ಭಜನೆ ಯೊಂದಿಗೆ ಸ್ಥಳೀಯ ಶಾಲಾ ಮಕ್ಕಳ ನೃತ್ರ್ಯಕಾರ್ಯಕ್ರಮ , ಅಂತರ್ ಜಿಲ್ಲಾ ಮಟ್ಟದ ಕುಣಿತ ಭಜನೆ ಸ್ಪರ್ಧೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಸೆ.15ರಂದು ಭಕ್ತಿಗೀತೆ ಸ್ಪರ್ಧೆ, ನೃತ್ಯ ವೈವಿಧ್ಯ ಹಾಗೂ ಯಕ್ಷ ರಾಘವ ಜನ್ಸಾಲೆ ತಂಡದಿಂದ ಅದ್ದೂರಿ ಯಕ್ಷಗಾನ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆದವು.
ಸೆ.16ರಂದು ಶ್ರೀ ದೇವರಿಗೆ ವಿಶೇಷ ಪೂಜೆ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ವಿಸರ್ಜನೆ ಮಾಡುವ ಮೂಲಕ ಉತ್ಸವಕ್ಕೆ ಸಮಾರೋಪವಾಯಿತು.
ಉತ್ಸವದ ಅಂಗವಾಗಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಸ್ಥಳೀಯರು, ಭಕ್ತರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಮೂರು ದಿನಗಳ ಕಾಲ ನಡೆದ ಗಣೇಶೋತ್ಸವವು ಧಾರ್ಮಿಕ ಭಕ್ತಿ ಹಾಗೂ ಸಾಂಸ್ಕೃತಿಕ ಸಂಭ್ರಮಕ್ಕೆ ವೇದಿಕೆಯಾಯಿತು.
ಗಣೇಶೋತ್ಸವ ದ ಪ್ರಯುಕ್ತ ಸ್ಥಳೀಯರಿಗೆ ಶಾಲಾ ಮಕ್ಕಳಿಗೆ ರವೀಂದ್ರ ಗಾಣಿಗ ಭಾರತೀಯ ರೈಲ್ವೆ ಇಲಾಖೆ ಇವರ ಮುಂದಾಳತ್ವ ದಲ್ಲಿ ಕ್ರೀಡಾಕೂಟ ಹಾಗೂ ಛದ್ಮವೇಶ ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು ಹಾಗೂ ಸ್ಥಳೀಯ ಶಾಲಾ ಮಕ್ಕಳಿಗಾಗಿ ಗಿರೀಶ್ ಗಾಣಿಗ ಚಿತ್ರಕಲಾ ಶಿಕ್ಷಕರು ತಗ್ಗರ್ಸೆ ಇವರ ಸಹಕಾರ ದಲ್ಲಿ ಚಿತ್ರಕಲಾ ಸ್ಪರ್ಧೆ ನಡೆಸಿ ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಯಿತು
ಸುಭಾಷ್ ಬಿ ಪೂಜಾರಿ ಅವರು ಮಾತನಾಡಿ,“37ವರ್ಷಗಳಿಂದ ಈ ಗಣೇಶೋತ್ಸವವು ನಿರಂತರವಾಗಿ ನಡೆದುಕೊಂಡು ಬರುತ್ತಿದ್ದು, ಇದರ ಹಿಂದೆ ನಮ್ಮೂರಿನ ಪ್ರತಿಯೊಬ್ಬರ ಸಹಕಾರ, ಪ್ರೋತ್ಸಾಹ ಮತ್ತು ಪರಿಶ್ರಮವಿದೆ
ಉತ್ಸವದ ಯಶಸ್ಸಿಗೆ ಸಹಕರಿಸಿದ ಎಲ್ಲಾ ದಾನಿಗಳು, ಸಂಘ-ಸಂಸ್ಥೆಗಳು ಹಾಗೂ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಮುಂದೆಯೂ ಇದೇ ರೀತಿಯ ಸಹಕಾರ ಮುಂದುವರಿಯಲಿ ಎಂದರು

ಉಪನ್ಯಾಸಕರಾದ ಪಾಂಡುರಂಗ ಅವರು ಮಾತನಾಡಿ, ಗಣೇಶೋತ್ಸವವು ನಮ್ಮ ಧಾರ್ಮಿಕ ನಂಬಿಕೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಆಚರಣೆಯಾಗಿದೆ
ಇಂತಹ ಉತ್ಸವಗಳು ಗ್ರಾಮದ ಜನರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಪರಸ್ಪರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ
ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಿದ ಸಮಿತಿ ಹಾಗೂ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರು, ಕಾರ್ಯದರ್ಶಿ, ಸಮಿತಿಯ ಸರ್ವ ಸದಸ್ಯರು, ವಿವಿಧ ಗಣ್ಯರು, ದಾನಿಗಳು, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು

