ಮಂಜೇಶ್ವರ: ಗಣೇಶೋತ್ಸವದ ಅಂಗವಾಗಿ ವಿಸರ್ಜನೆಗಾಗಿ ಸಮುದ್ರದತ್ತ ತೆರಳುತ್ತಿದ್ದ ಭಕ್ತಾದಿಗಳ ಶೋಭಾಯಾತ್ರೆಗೆ ಮಂಜೇಶ್ವರ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಆತ್ಮೀಯ ಸ್ವಾಗತ ಕೋರಿ, ಸಿಹಿ ಪಾನೀಯ ವಿತರಿಸಲಾಯಿತು.
ನಾಡಿನ ಸೌಹಾರ್ದತೆ, ಸಹೋದರತೆ ಹಾಗೂ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಜಾತಿ-ಮತ ಭೇದವಿಲ್ಲದೆ ಪ್ರತಿಯೊಬ್ಬರೂ ಒಂದಾಗಿ ಆಚರಿಸುವ ಇಂತಹ ಹಬ್ಬಗಳು ನಮ್ಮ ಒಗ್ಗಟ್ಟು ಮತ್ತು ಸಾಮಾಜಿಕ ಐಕ್ಯತೆಯ ಸಂಕೇತವಾಗಿವೆ ಎಂದು ಸಂಘಟಕರು ತಿಳಿಸಿದರು.
ಈ ಸ್ವಾಗತ ಕಾರ್ಯಕ್ರಮದಲ್ಲಿ ಮಂಜೇಶ್ವರದ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

