ಐತಿಹಾಸಿಕ ಕರಾವಳಿ ಕ್ಯಾಬಿನೆಟ್ನಲ್ಲಿ ತುಳು ರಾಜ್ಯಭಾಷೆಯಾಗಿ ಅನುಮೋದನೆ ದೊರೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇದು ತುಳುನಾಡಿನ ಜನತೆಯಲ್ಲಿ ಹೊಸ ಹುಮ್ಮಸ್ಸು ನೀಡಿದೆ.
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡರನ್ನು ಭೇಟಿಯಾದ ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಲಯನ್ ಅನಿಲ್ ದಾಸ್ ಮತ್ತು ಪದಾಧಿಕಾರಿಗಳು ತುಳುನಾಡಿನ ಕುರಿತು ನಾರಾಯಣ ಗೌಡರು ಮಂಡಿಸಿದ ಅಭಿಪ್ರಾಯಕ್ಕೆ ಧನ್ಯವಾದ ಸಲ್ಲಿಸಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷರು ಲಯನ್ ಅನಿಲ್ ದಾಸ್ ಈಗಾಗಲೇ ಕರ್ನಾಟಕ ಸರ್ಕಾರ ಮಟ್ಟದಿಂದ ನಡೆಯುತ್ತಿರುವ ಕರವಳಿ ಕ್ಯಾಬಿನೆಟ್ಟನಲ್ಲಿ ತುಳುಭಾಷೆಗೆ ಅಧಿಕೃತ ಸ್ಥಾನಮಾನ ಸಿಗುವುದು ಬಹುತೇಕ ಖಚಿತಗೊಂಡ ಹಿನ್ನಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣ ಗೌಡರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದು, ಇದರ ಮೊದಲೇ ಸರಕಾರವನ್ನು ವಿವಿಧ ಕಾರ್ಯಕ್ರಮ ಸಂದರ್ಭಗಳಲ್ಲಿ ಒತ್ತಾಯಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ತುಳುನಾಡಿನಲ್ಲಿರುವ ಹಲವಾರು ಸಂಘಟನೆಗಳ ನಿರಂತರ ಹೋರಾಟ ಹಾಗೂ ಹಕ್ಕೋತ್ತಾಯಗಳ ಮೂಲಕ ಸರಕಾರದ ಗಮನ ಸೆಳೆದಿದ್ದು, ಇದಕ್ಕೆ ತಾರ್ಕಿಕ ಅಂತ್ಯವನ್ನು ನೀಡುವಲ್ಲಿ ಹಾಗೂ ಬಹು ದಿನಗಳ ಕನಸು ನನಸಾಗಿಸುವಲ್ಲಿ ಈ ಕ್ಯಾಬಿನೆಟ್ ಸಭೆಯು ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ ಎಂದರು. ಜೊತೆಗೆ ಕನ್ನಡದ ಸೋದರ ನುಡಿಯಾದ ತುಳು ನುಡಿಯ ಉಳಿವು, ಬೆಳವಣಿಗೆ ಮತ್ತು ಗೌರವಕ್ಕಾಗಿ ತುಳುವರು ಅನೇಕ ವರ್ಷಗಳಿಂದ ಮಂಡಿಸುತ್ತಿರುವ ಹಕ್ಕೊತ್ತಾಯವನ್ನು ಕರ್ನಾಟಕ ರಕ್ಷಣಾ ವೇದಿಕೆ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ತಿಳಿಸಿದರು.

