ಮೂಲ್ಕಿ: ಮಹಿಳಾ ಕಬಡ್ಡಿ ವಿಶ್ವಕಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ದೇಶದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಕರಾವಳಿಯ ಹೆಮ್ಮೆಯ ಕ್ರೀಡಾಪಟು ಧನಲಕ್ಷ್ಮಿ ಪೂಜಾರಿ ಅವರು ಮೂಲ್ಕಿಯ ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಸ್ವರ್ಣ ಸೌಹಾರ್ದ ಸಹಕಾರಿ ಸೊಸೈಟಿಯ ಸ್ವರ್ಣ ಸಂಭ್ರಮದ ಸನ್ಮಾನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಧನಲಕ್ಷ್ಮಿ ಪೂಜಾರಿ ಅವರು, ಬಪ್ಪನಾಡು ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಇತ್ತೀಚೆಗೆ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಮಹಿಳಾ ಕಬಡ್ಡಿ ವಿಶ್ವಕಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಧನಲಕ್ಷ್ಮಿ, ದೇಶದ ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದ್ದರು. ಅವರ ಈ ಸಾಧನೆ ಕರಾವಳಿ ಭಾಗದ ಕ್ರೀಡಾಭಿಮಾನಿಗಳಲ್ಲಿ ಹೆಮ್ಮೆಯ ಸಂಭ್ರಮ ಮೂಡಿಸಿದೆ.
ಸುರತ್ಕಲ್ನ ಇಡ್ಯಾ ಮೂಲದವರಾದ ಧನಲಕ್ಷ್ಮಿ, ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕಬಡ್ಡಿ ತರಬೇತಿ ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಬಪ್ಪನಾಡು ಕ್ಷೇತ್ರದಲ್ಲಿ ದೇವಿಯ ದರ್ಶನ ಪಡೆದ ಬಳಿಕ ದೇವಸ್ಥಾನದ ಅರ್ಚಕ ಪ್ರಸಾದ್ ಭಟ್ ಅವರಿಂದ ಪ್ರಸಾದ ಸ್ವೀಕರಿಸಿದರು. ಕ್ರೀಡಾ ಸಾಧನೆಯ ಮೂಲಕ ದೇಶದ ಗೌರವ ಹೆಚ್ಚಿಸಿದ ಧನಲಕ್ಷ್ಮಿ ಅವರು ದೇವಿಯ ಆಶೀರ್ವಾದ ಪಡೆದು ತಮ್ಮ ಹುಟ್ಟೂರಿನ ಸಂಭ್ರಮದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಭುಜಂಗ ಆಚಾರ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬಪ್ಪನಾಡು ಕ್ಷೇತ್ರಕ್ಕೆ ಕಬಡ್ಡಿ ಪಟು ಧನಲಕ್ಷ್ಮಿ ಪೂಜಾರಿ ಭೇಟಿ
RELATED ARTICLES

