HomeFresh News2026-27ನೇ ಸಾಲಿನ ಕಂಬಳ ಋತುವಿನ ಪರಿಷ್ಕೃತ ಪಟ್ಟಿ ಪ್ರಕಟ : ಮೇ.1 ಕಡಂದಲೆಯಲ್ಲಿ ಕೊನೆಯ ಕಂಬಳ

2026-27ನೇ ಸಾಲಿನ ಕಂಬಳ ಋತುವಿನ ಪರಿಷ್ಕೃತ ಪಟ್ಟಿ ಪ್ರಕಟ : ಮೇ.1 ಕಡಂದಲೆಯಲ್ಲಿ ಕೊನೆಯ ಕಂಬಳ

ಮೂಡುಬಿದಿರೆ: 2026-27ನೇ ಸಾಲಿನ ಕಂಬಳ ಋತುವಿನ ಪರಿಷ್ಕೃತ ವೇಳಾಪಟ್ಟಿ ಪ್ರಕಟಗೊಂಡಿದ್ದು, ಈಗಾಗಲೇ ನವೆಂಬರ್ 7ರಂದು ಪಣಪಿಲದಲ್ಲಿ ಮೊದಲ ಕಂಬಳ ನಡೆದಿದ್ದು,ಕಡಂದಲೆಯಲ್ಲಿ ಮೇ 1ರಂದು ನಡೆಯುವ ಕಂಬಳದೊಂದಿಗೆ ಈ ಸಾಲಿನ ಕಂಬಳ ಋತು ಮುಕ್ತಾಯಗೊಳ್ಳಲಿದ್ದು ಈ ಮೂಲಕ ಒಟ್ಟು 27 ಕಂಬಳಗಳ ದಿನಾಂಕ ಮತ್ತು ಸ್ಥಳಗಳನ್ನು ವೇಳಾಪಟ್ಟಿಯಲ್ಲಿ ಪ್ರಕಟಿಸಲಾಗಿದೆ.

ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ನವೆಂಬರ್ 7ರಂದು ಪಣಪಿಲ, ನವೆಂಬರ್ 14ರಂದು ಸಾಣೂರು, ನವೆಂಬರ್ 21ರಂದು ಕೊಡಂಗೆ, ನವೆಂಬರ್ 28ರಂದು ಕಕ್ಕೆಪದವು, ಡಿಸೆಂಬರ್ 5ರಂದು ಹೊಕ್ಕಾಡಿಗೋಳಿ, ಡಿಸೆಂಬರ್ 12ರಂದು ಬಾರಾಡಿಬೀಡು, ಡಿಸೆಂಬರ್ 19ರಂದು ವೇಣೂರು, ಡಿಸೆಂಬರ್ 26ರಂದು ಮೂಲ್ಕಿ ಹಾಗೂ ಡಿಸೆಂಬರ್ 27ರಂದು ಬಳ್ಳಮಂಜದಲ್ಲಿ ಕಂಬಳಗಳು ನಡೆಯಲಿದೆ.
ಮುಂದುವರಿದು, ಜನವರಿ 2ರಂದು ಮಂಗಳೂರು, ಜನವರಿ 9ರಂದು ಮಿಯ್ಯಾರು, ಜನವರಿ 16ರಂದು ನರಿಂಗಾಣ, ಜನವರಿ 23ರಂದು ಮೂಡುಬಿದಿರೆ, ಜನವರಿ 30ರಂದು ಪುತ್ತೂರು, ಫೆಬ್ರವರಿ 6ರಂದು ಐಕಳ, ಫೆಬ್ರವರಿ 13ರಂದು ಜಪ್ಪಿನಮೊಗರು, ಫೆಬ್ರವರಿ 20ರಂದು ಅಡ್ಡೆ ಹಾಗೂ ಫೆಬ್ರವರಿ 27ರಂದು ವಾಮಂಜೂರಿನಲ್ಲಿ ಕಂಬಳ ಆಯೋಜನೆಯಾಗಲಿದೆ.
ಮಾರ್ಚ್ 6ರಂದು ಎರ್ಮಾಳ್, ಮಾರ್ಚ್ 13ರಂದು ಬಂಟ್ವಾಳ, ಮಾರ್ಚ್ 20ರಂದು ಬಂಗಾಡಿ, ಮಾರ್ಚ್ 27ರಂದು ಉಪ್ಪಿನಂಗಡಿ, ಏಪ್ರಿಲ್ 3ರಂದು ಗುರುಪುರ, ಏಪ್ರಿಲ್ 10ರಂದು ಬಲ್ಕುಂಜೆ, ಏಪ್ರಿಲ್ 17ರಂದು ಹರೇಕಳ, ಏಪ್ರಿಲ್ 24ರಂದು 80 ಬಡಗಬೆಟ್ಟು ಹಾಗೂ ಮೇ 1ರಂದು ಕಡಂದಲೆಯಲ್ಲಿ ಕಂಬಳ ನಡೆಯಲಿದೆ ಎಂದು ರಾಜ್ಯ ಕಂಬಳ ಅಸೋಸಿಯೇಷನ್ ನ ಅಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಮತ್ತು ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಸನಿಲ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Swarna jewellery - 2
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments