ಯಾವುದೇ ಹಣಕಾಸು ಸಂಸ್ಥೆಯಲ್ಲಿ ಉತ್ತಮ ಗ್ರಾಹಕರು ಇದ್ದಾಗ ಮಾತ್ರ ಆ ಸಂಸ್ಥೆ ಬೆಳೆಯಲು ಸಾಧ್ಯ. ಇದಕ್ಕೆ ಪೂರಕವಾಗಿ ಸೊಸೈಟಿ ಸಿಬ್ಬಂದಿಗಳು ತಮ್ಮ ಸೇವೆಯನ್ನು ನೀಡಿದ್ದಲ್ಲಿ ಇನ್ನಷ್ಟು ಉತ್ತಮ ಗ್ರಾಹಕರನ್ನು ಆಕರ್ಷಿಸಬಹುದು ಈ ನಿಟ್ಟಿನಲ್ಲಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯು ಅಗ್ರಗಣ್ಯ ಸ್ಥಾನದಲ್ಲಿದೆ ಎಂದು ಪಡುಬಿದ್ರಿ ವಕೀಲರಾದ ಶ್ರೀಮತಿ ಸುಕನ್ಯಾ ವೀರೇಶ್ ನುಡಿದರು.
ಅವರು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಪಡುಬಿದ್ರಿ ಶಾಖೆಯಲ್ಲಿ ನಡೆದ ಗ್ರಾಹಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಪಡುಬಿದ್ರೆ ಗಣಪತಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಪಿ. ಕೆ. ಗಣಪತಿ ಭಟ್ ರವರು ಸಾಂದರ್ಭಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿ ನಿರ್ದೇಶಕರಾದ ಶ್ರೀ ಗಣೇಶ್ ಪ್ರಸಾದ ದೇವಾಡಿಗ ರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಡುಬಿದ್ರೆ ಸಹಕಾರಿ ಸಂಘ ಇದರ ನಿವೃತ್ತ ಶಾಖಾ ಪ್ರಬಂಧಕರಾದ ಶ್ರೀ ರವೀಂದ್ರರಾವ್ ಉಪಸ್ಥಿತರಿದ್ದರು.
ಪಡುಬಿದ್ರೆ ಶಾಖಾ ಪ್ರಬಂಧಕರಾದ ಶ್ರೀಮತಿ ಅಂಜಲಿ ಉಳ್ಳಾಲ್ ಎಸ್ ರವರು ಸ್ವಾಗತಿಸಿ, ಸಹ ಸಿಬ್ಬಂದಿ ಕೆ ಪರ್ಣಾಲಿ ಕಿಣಿ ರವರು ವಂದಿಸಿದರು.


