HomeFresh Newsಮೂಡುಬಿದಿರೆ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಏಕಾಹ ಭಜನೆ ಸುವರ್ಣ ಮಹೋತ್ಸವ

ಮೂಡುಬಿದಿರೆ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಏಕಾಹ ಭಜನೆ ಸುವರ್ಣ ಮಹೋತ್ಸವ

ಮೂಡುಬಿದಿರೆ: ಮೂಡುಬಿದಿರೆಯ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ನವೆಂಬರ್ 15ರಿಂದ 21ರವರೆಗೆ ನಡೆಯಲಿರುವ ಏಕಾಹ ಭಜನೆ ಸುವರ್ಣ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಮಹೋತ್ಸವದ ಯಶಸ್ಸಿಗಾಗಿ ಅಲಂಗಾರಿನ ಶ್ರೀ ಶ್ರೀ ಜಗದ್ಗುರು ಅಯ್ಯಸ್ವಾಮಿ ಮಠದಲ್ಲಿ ಹಾಗೂ ಶ್ರೀ ಹನುಮಂತ ಗುಡಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಶ್ರೀಕ್ಷೇತ್ರದಲ್ಲಿ ಪ್ರಾರ್ಥನೆ ಮತ್ತು ತೋರಣ ಮುಹೂರ್ತ ಕಾರ್ಯಕ್ರಮ ನೆರವೇರಿತು.

ಏಳು ದಿನಗಳ ಕಾಲ ನಡೆಯಲಿರುವ ಈ ಧಾರ್ಮಿಕ ಮಹೋತ್ಸವದಲ್ಲಿ ಭಜನೆ, ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಇನ್ನು ಕ್ಷೇತ್ರದಲ್ಲಿ ನ. 17ರಂದು ಬೆಳಿಗ್ಗೆ ಗುರು ಯಜ್ಞ ಮತ್ತು ದುಗಾ೯ ಹೋಮ ಪ್ರಾರಂಭಗೊಳ್ಳಲಿದೆ. ನ. 18ರಂದು ಬೆಳಿಗ್ಗೆ ಸುರ್ಯೋದಯದಿಂದ ’ಅಖಂಡ ತ್ರಿದಿನ ಭಜನೆ’ ಪ್ರಾರಂಭಗೊಳ್ಳಲಿದೆ.ರಾತ್ರಿ 8.೦೦ಗಂಟೆಯಿಂದ ಸಂಗೀತಾ ಬಾಲಚಂದ್ರ ಉಡುಪಿ ಅವರಿಂದ ಭಕ್ತಿ ಸಂಗೀತ, ನ. 19ರಂದು ರಜತ ಕುಲಕರ್ಣಿ ಕಿತ್ತೂರು ಅವರಿಂದ ರಜತವಾಣಿ, ನ. 20ರಂದು ಸಂಜೆ 6.30ಕ್ಕೆ ನಗರ ಭಜನೆ, 7.30ಕ್ಕೆ ದೀಪಾರಾಧನೆ, ಮಹಾಪೂಜೆ, 8.೦೦ರಿಂದ ಕೀರ್ತನ್ ಹೊಳ್ಳ ಬೆಂಗಳೂರು ಅವರಿಂದ ಕೀರ್ತನಾಮೃತ ಹಾಗೂ ನ. 21 ಶನಿವಾರ ಸುಯೋ೯ದಯಕ್ಕೆ ಅಖಂಡ ತ್ರಿದಿನ ಭಜನಾ ಮಂಗಳ ನಡೆಯಲಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments