HomeFresh Newsತೊಕ್ಕೊಟ್ಟಿನ ಥ್ರೆಡ್ ಹೌಸ್ ಮಳಿಗೆ ಮಾಲಕ ಆತ್ಮಹತ್ಯೆ

ತೊಕ್ಕೊಟ್ಟಿನ ಥ್ರೆಡ್ ಹೌಸ್ ಮಳಿಗೆ ಮಾಲಕ ಆತ್ಮಹತ್ಯೆ

ತೊಕ್ಕೊಟ್ಟು ಜಂಕ್ಷನ್‍ನಲ್ಲಿರುವ ಥ್ರೆಡ್ ಹೌಸ್ ಮಳಿಗೆಯ ಮಾಲಕ ಅಂಗಡಿಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೂಲತ ಸೇವಂತಿಗುಡ್ಡೆ ನಿವಾಸಿಯಾಗಿದ್ದ ಪ್ರಸ್ತುತ ಕನೀರುತೋಟದಲ್ಲಿ ವಾಸಿಸುತ್ತಿರುವ ಪ್ರವೀಣ್ ಆಳ್ವ (45) ಆತ್ಮಹತ್ಯೆಗೈದಿದ್ದು, ತೊಕ್ಕೊಟ್ಟು ಜಂಕ್ಷನ್ ಬಳಿ ಹೊಲಿಗೆ ನೂಲು ಸೇರಿದಂತೆ ಟೈಲರ್ ಅಂಗಡಿಗಳಿಗೆ ಹೊಲಿಗೆ ಸಂಬಂಧಿಸಿದ ಕಚ್ಚಾ ವಸ್ತುಗಳನ್ನು ಪೂರೈಸುವ ಥ್ರೆಡ್ ಹೌಸ್ ಅಂಗಡಿಯನ್ನು ಕಳೆದ ಏಳೆಂಟು ವರ್ಷಗಳಿಂದ ನಡೆಸುತ್ತಿದ್ದರು.

ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಅವರು ಬೆಳಗ್ಗೆ 6.30ಕ್ಕೆ ಮನೆಯಿಂದ ಹೊರಟಿದ್ದು, ಅಂಗಡಿಯೊಳಗೆ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಅವರು ಆತ್ಮಹತ್ಯೆಗೈದ ಸ್ಥಳದಲ್ಲಿ ಚೀಟಿಯೊಂದರಲ್ಲಿ ನನ್ನ ಆತ್ಮಹತ್ಯೆಗೆ ನಾನೇ ಕಾರಣ ಎಂದು ಬರೆದು ಆತ್ಮಹತ್ಯೆಗೈದಿದ್ದಾರೆ. ಮೃತರು ತಾಯಿ, ಪತ್ನಿ ಪುತ್ರನನ್ನು ಅಗಲಿದ್ದಾರೆ
ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments