ಬದಿಯಡ್ಕ ಸಂಸ್ಕೃತಿ ಭವನದಲ್ಲಿ “ನುಡಿ ಪುರ್ಪ ” ಸಂಸ್ಮರಣಾ ಕಾರ್ಯಕ್ರಮ

ಇತ್ತೀಚೆಗೆ ನಿಧನರಾದ ತುಳು ಕನ್ನಡ ಮಲೆಯಾಳ ಭಾಷೆಯ ಉದಯೋನ್ಮುಖ ಲೇಖಕಿ ಶ್ವೇತ ಕಜೆ ಇವರಿಗೆ ಜೈ ತುಳುನಾಡು (ರಿ) ಸಂಘಟನೆ ಹಾಗೂ ತುಳುವೆರ ಆಯನ ಕೂಟದ ವತಿಯಿಂದ ಬದಿಯಡ್ಕ ಸಂಸ್ಕೃತಿ ಭವನದಲ್ಲಿ “ನುಡಿ ಪುರ್ಪ ” ಸಂಸ್ಮರಣಾ ಕಾರ್ಯಕ್ರಮ ನಡೆಯಿತು.

ಇತ್ತೀಚೆಗೆ ನಿಧನರಾದ ಕುಂಬಳೆ ಬದಿಯಡ್ಕ ಬೇಳಿಂಜೆ ಗ್ರಾಮ ಕಜೆ ನಿವಾಸಿ, ಖ್ಯಾತ ತುಳು ,ಕನ್ನಡ, ಮಲೆಯಾಳಂ ಲೇಖಕಿ, ಜೈ ತುಳುನಾಡ್(ರಿ) ನ ಸದಸ್ಯೆ ಕು| ಶ್ವೇತಾ ಕಜೆ ಇವರಿಗೆ, ಜೈ ತುಳುನಾಡ್(ರಿ) ಸಂಘಟನೆ ಹಾಗೂ ತುಳುವೆರೆ ಆಯನ ಕೂಟ ಬದಿಯಡ್ಕ ವತಿಯಿಂದ ನುಡಿ ಪುರ್ಪ ಸಂಸ್ಮರಣಾ ಕಾರ್ಯಕ್ರಮವು ಬದಿಯಡ್ಕ ಸಂಸ್ಕೃತಿ ಭವನದಲ್ಲಿ ನಡೆಯಿತು. ಮೌನ ಪ್ರಾರ್ಥನೆಯ ನಂತರ ಶ್ವೇತಾ ರವರ ಭಾವಚಿತ್ರಕ್ಕೆ ಪುಷ್ಪರ್ಚನೆ ಗೈಯ್ಯಲಾಯಿತು. ಜೈ ತುಳುನಾಡ್ ನ ಉಪಾಧ್ಯಕ್ಷರಾದ ಹರಿಕಾಂತ ಕಾಸರಗೋಡು, ಜೈ ತುಳುನಾಡ್ ಸಾಹಿತ್ಯ ಸಮಿತಿಯ ಕುಶಲಾಕ್ಷಿ ಕಣ್ವತೀರ್ಥ, ತುಳುವೆರೆ ಆಯನ ಕೂಟದ ಅಧ್ಯಕ್ಷರಾದ ಗೋಪಾಲ ಕೃಷ್ಣ ವಾಂತಿಚ್ಚಾಲ್, ರಾಜೇಶ್ ಆಳ್ವ ನುಡಿ ನಮನವನ್ನು ಸಲ್ಲಿಸಿದರು. ಉಮೇಶ್ ಶಿರಿಯಾ ಹಾಗೂ ಗೀತಾ ಲಕ್ಷ್ಮೀಶ್ ಮಂಗಳೂರು ಶ್ವೇತಾ ರವರ ಕವನ ವಾಚಿಸಿದರು. ಜೈ ತುಳುನಾಡ್‍ನ ಕಾರ್ಯದರ್ಶಿ ಅವಿನಾಶ್ ಮುಕ್ಕ ಕಾರ್ಯಕ್ರಮ ನಿರೂಪಿಸಿದರು, ಜಗನ್ನಾಥ ಬದಿಯಡ್ಕ ಹಾಗೂ ಜಯರಾಜ್ ಮಣಿಯಂಪಾರೆ ಸಹಕರಿಸಿದರು.ಜೈ ತುಳುನಾಡ್ ನ ಉಪಾಧ್ಯಕ್ಷರಾದ ವಿಶು ಶ್ರೀಕೇರ ಹಾಗೂ ಸಂಘಟನಾ ಕಾರ್ಯದರ್ಶಿ ಸದಾಶಿವ ಮುದ್ರಾಡಿ ಉಪಸ್ಥಿತರಿದ್ದರು.
ಜೈ ತುಳುನಾಡ್ ಸಂಘಟನೆಯ ಉಡುಪಿ, ಮಂಗಳೂರು, ಕಾಸರಗೋಡು, ಪುತ್ತೂರು ಭಾಗದ ಸದಸ್ಯರು ಹಾಗೂ ತುಲುವೆರೆ ಆಯನ ಕೂಟದ ಹಲವು ಸದಸ್ಯರು ಹಾಗೂ ದಿ.ಶ್ವೇತಾ ರವರ ಸಾಹಿತ್ಯ ಅಭಿಮಾನಿಗಳು ಬಾಗವಹಿಸಿದ್ದರು.

Related Posts

Leave a Reply

Your email address will not be published.