HomeFresh Newsದ.ಕ. ಜಿಲ್ಲೆಯಲ್ಲಿ ಮಳೆಯ ಅವಾಂತರ : ಹರಿಹರ, ಪಲ್ಲತಡ್ಕ, ಗುಂಡಡ್ಕ ಸೇತುವೆ ಮುಳುಗಡೆ

ದ.ಕ. ಜಿಲ್ಲೆಯಲ್ಲಿ ಮಳೆಯ ಅವಾಂತರ : ಹರಿಹರ, ಪಲ್ಲತಡ್ಕ, ಗುಂಡಡ್ಕ ಸೇತುವೆ ಮುಳುಗಡೆ

ಕಡಬ: ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕದ ಬಳಿಯ ಗುಂಡಡ್ಕ ಸೇತುವೆ ಮುಳುಗಡೆ ಹಾಗೂ ರಸ್ತೆಗೆ ಬಂಡೆ ಬಿದ್ದು, ಬರೆ ಜರಿದು ರಸ್ತೆ ಸಂಚಾರವು ಸ್ಥಗಿತಗೊಂಡಿದೆ. ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಡಬ ಮತ್ತು ಸುಳ್ಯ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ದೇವರ ಗದ್ದೆ ಎಂಬಲ್ಲಿ ರಸ್ತೆಗೆ ಮಣ್ಣು ಕುಸಿದಿದೆ, ದೇವರಗದ್ದೆ ಎಂಬಲ್ಲಿ ಬಂಡೆ ಬಿದ್ದಿದ್ದು, ವಿದ್ಯುತ್ ಕಂಬಗಳು ಮುರಿದು ಬಿದ್ದ ಘಟನೆ ನಡೆದಿದೆ. ಕಳೆದೆರಡು ದಿನಗಳಿಂದ ಕಡಬ, ಸುಳ್ಯ ತಾಲೂಕಿನ ಹಲವು ಭಾಗದಲ್ಲಿ ಭೀಕರ ಮಳೆಯಾಗುತಿದ್ದು ಗುಂಡಡ್ಕ ಸೇತುವೆ ಬಹುತೇಕ ಕಾಲ ಮುಳುಗಿದ್ದು ಮತ್ತೆ ನೀರಿನ ಮಟ್ಟ ಏರಿದೆ. ಈ ಎಲ್ಲಾ ಘಟನೆಗಳಿಂದ ಹರಿಹರ ಪಲ್ಲತಡ್ಕ – ಐನೆಕಿದು – ಮಲೆಯಾಳ ರಸ್ತೆ ಸಂಚಾರವು ಸ್ಥಗಿತವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಉಭಯ ತಾಲೂಕುಗಳ ತಹಶಿಲ್ದಾರ್‍ಗಳು ಆಯಾ ತಾಲೂಕುಗಳ ಎಲ್ಲಾ ಅಂಗನವಾಡಿ, ಪ್ರೌಢಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆದೇಶ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments