ದಕ್ಷಿಣ ಕೊರಿಯಾದಲ್ಲಿ 25ನೇ ಅಂತರರಾಷ್ಟ್ರೀಯ ಜಾಂಬೂರಿ: ಆಳ್ವಾಸ್ ನ 8 ವಿದ್ಯಾರ್ಥಿಗಳು ಆಯ್ಕೆ

ಮೂಡುಬಿದಿರೆ : ದಕ್ಷಿಣ ಕೊರಿಯಾದ ಜಿಯೋಲ್ಲಾದಲ್ಲಿ ಆಗಸ್ಟ್ 2 ರಿಂದ 12ರ ವರೆಗೆ ನಢೆಯುವ 25ನೇ ಅಂತರರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 8 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.ಆಳ್ವಾಸ್‌ನ 8 ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಟ್ಟು 48 ಸ್ಕೌಟ್ಸ್ ಮತ್ತು ಗೈಡ್ಸ್ ಗಳು ಭಾಗವಹಿಸಲಿದ್ದಾರೆ.

ಆಳ್ವಾಸ್ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಅನನ್ಯ, ಹತ್ತನೇಯ ತರಗತಿ ವಿದ್ಯಾರ್ಥಿಗಳಾದ ಮನುಜ ನೇಹಿಗ, ಸನ್ಮತ್ ಆಚಾರ್ಯ, ಚಿರಾಗ್ ಆಚಾರ್ಯ ಹಾಗೂ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಶಾಂಭವಿ, ಮನುಶ್ರಿ ಆನಂದ ಮೆಟ್ಟಿ, ಪವನಾ ಡಿ.ಜಿ ಮತ್ತು ಪೂರ್ಣಚಂದ್ರ ಎಂ ಪಾಲ್ಗೊಳ್ಳಲಿದ್ದಾರೆ.

ಜಾಂಬೂರಿಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಪ್ರತಿಭಾ ಪ್ರದರ್ಶನ ನೀಡಲಿದ್ದಾರೆ.ಆಳ್ವಾಸ್‌ನ ಸ್ಕೌಟ್ ಮಾಸ್ಟರ್ ಪ್ರಕಾಶ ಎಚ್. ವಿದ್ಯಾರ್ಥಿಗಳ ತಂಡದೊಂದಿಗೆ ತೆರಳಲಿದ್ದಾರೆ.

Related Posts

Leave a Reply

Your email address will not be published.