HomeFresh Newsಪಡುಬಿದ್ರಿ: ಅಕ್ರಮ ಮರಳು ಸಾಗಾಟ: ಮಾಲಕ-ಚಾಲಕನ ವಿರುದ್ಧ ಪ್ರಕರಣ ದಾಖಲು

ಪಡುಬಿದ್ರಿ: ಅಕ್ರಮ ಮರಳು ಸಾಗಾಟ: ಮಾಲಕ-ಚಾಲಕನ ವಿರುದ್ಧ ಪ್ರಕರಣ ದಾಖಲು

ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿಯ ನಯಾತ್ ಕಟ್ಟಡದ ಮುಂಭಾಗ ಕದ್ದು ಅಕ್ರಮವಾಗಿ ಸಾಗಿಸುತ್ತಿದ್ದ ಟಿಪ್ಪರ್, ಮರಳು ಸಹಿತ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಗಳಾದ ಮಂತ್ರದೇವತೆ ಹೆಸರಿನ ಟಿಪ್ಪರ್ ಮಾಲಕ ಗುರುಪುರದ ರಾಜೇಶ್ ಹಾಗೂ ಅದರ ಚಾಲಕ ನಂದಿಕೂರು ದೇವಸ್ಥಾನ ಬಳಿಯ ನಿವಾಸಿ ಸರ್ಫ್ರಾಜ್ ಆರೋಪಿಗಳು.
ಟಿಪ್ಪರ್ ಮಾಲಿಕನ ಸೂಚನೆಯಂತೆ ವಾಹನದಲ್ಲಿ ಮರಳು ತುಂಬಿಸಿ ಪಡುಬಿದ್ರಿ ಬೀಚ್ ಕಡೆ ಸಾಗಿಸಲು ಹೋಗುತ್ತಿದ್ದ ಟಿಪ್ಪರನ್ನು ಪಡುಬಿದ್ರಿ ಪಿಎಸ್ ಐ ಪ್ರಸನ್ನ ಎಂ.ಎಸ್, ತಡೆದು ತಪಾಸಣೆ ನಡೆಸಿದಾಗ ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಯುನಿಟ್ ಮರಳು ಪತ್ತೆಯಾಗಿದ್ದು, ಈ ಮರಳಿಗೆ ಪರ್ಮಿಟ್ ಆಗಲಿ ಪರವಾನಿಗೆ ಸಹಿತ ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿ ಇರದಿರುವ ಕಾರಣ ಮರಳು ಸಹಿತ ವಾಹನವನ್ನು ವಶಕ್ಕೆ ಪಡೆದು ಆರೋಪಿಗಳಾದ ರಾಜೇಶ್ ಹಾಗೂ ಸರ್ಫ್ರಾರಾಜ್ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments