ತ್ರಾಸಿಯಲ್ಲಿ ಎ-ವನ್ ಸ್ಟೇಷನ್ ಶುಭಾರಂಭ
ನಿಖಿಲ್ ಪೂಜಾರಿ ಮತ್ತು ಹೇಮಂತ್ ದೇವಾಡಿಗ ಇವರ ಮಾಲಿಕತ್ವದ ಎ-ವನ್ ಸರ್ವಿಸ್ ಸ್ಟೇಷನ್ ಇಂದು ಧಾರ್ಮಿಕ ವಿಧಿ ವಿಧಾನದ ಮೂಲಕ ಶುಭಾರಂಭಗೊಂಡಿದೆ
ವೆಲ್ ವಾಟರ್ ಪಾಲಿಶ್, ಕಸ್ಟಮ್ ಪಾಲಿಶ್ ಹಾಗೂ ಎಲ್ಲಾ ರೀತಿಯ ವಾಹನಗಳ ಸರ್ವಿಸ್ ಗಳು ಇಲ್ಲಿ ಲಭ್ಯವಿದ್ದು, ಯಾವುದೇ ವಾಹನಗಳಾದರೂ ಅದನ್ನು ಪಳಪಳ ಹೊಳೆಯುವಂತೆ ಮಾಡುವ ಮೂಲಕ ಮತ್ತೆ ತಮ್ಮ ವಾಹನಗಳ ಮೇಲೆ ಒಲವು ಹೆಚ್ಚುವಂತೆ ಸಿದ್ಧಗೊಳಿಸಲಾಗುತ್ತದೆ.
ಗ್ರಾಹಕರದ ಸುಂದರ್ ಕೊಠಾರಿ ಮಾತನಾಡಿ ಈ ಸಂಸ್ಥೆಯು ಈ ಹಿಂದೆ ಹಲವಾರು ಉತ್ತಮ ಕಾರ್ಯನಿರ್ವಹಿಸುತ್ತಾ ಬಂದಿದೆ ಇದೀಗ ಆತ್ಮೀಯರಾದ ನಿಖಿಲ್ ಪೂಜಾರಿ ಮತ್ತು ಹೇಮಂತ್ ದೇವಾಡಿಗ ಇವರ ನೇತೃತ್ವದಲ್ಲಿ ನೂತನವಾಗಿ ಹೊಸ ಆಯಮದೊಂದಿಗೆ ಶುಭಾರಂಭಗೊಂಡಿದೆ ಮುಂದೆ ಸಂಸ್ಥೆ ಉನ್ನತ ಬೆಳವಣಿಗೆ ನೋಡಿ ಸಮಾಜಕ್ಕೆ ಉತ್ತಮ ಕಾರ್ಯ ನಿರ್ವಹಿಸಲಿ ಎಂದು ಶುಭ ಹಾರೈಸಿದರು
ಈ ಸಂದರ್ಭದಲ್ಲಿ ಉದ್ಯಮಿ ಪ್ರಕಾಶ್ ಪೂಜಾರಿ ಉಪ್ಪುಂದ,ಗ್ರಾಮ ಪಂಚಾಯತ್ ಸದಸ್ಯರಾದ ಅಕ್ಷಯ್ ದೇವಾಡಿಗ, ಸತೀಶ್ ದೇವಾಡಿಗ ಪ್ರವೀಣ್ ಬಂಧುಗಳು ಸ್ನೇಹಿತರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.