ವೇದವ್ಯಾಸ ಕಾಮತ್ ಅಭಿವೃದ್ಧಿ ಹೇಳಿಕೆಗೆ ಆಮ್ ಆದ್ಮಿ ಪಾರ್ಟಿ ಸವಾಲು

ಮಂಗಳೂರುಃ ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ 4750 ಕೋಟಿ ರೂ ಅಭಿವೃದ್ಧಿ ಕೆಲಸಗಳು ನಡೆದಿದೆ ಎಂದಿರುವ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಾರ್ಟಿ, 4750 ಕೋಟಿಯಲ್ಲಿ ಶೇ.40 ಎಷ್ಟಾಗುತ್ತದೆ ಎಂದು ಪ್ರಶ್ನಿಸಿದೆ.

ಆಮ್ ಆದ್ಮಿ ಪಾರ್ಟಿ ಮುಖಂಡರಾದ ಸಂತೋಷ್ ಕಾಮತ್ ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ನಲ್ವತ್ತು ಪರ್ಸೆಂಟ್ ಕಮೀಷನ್ ವಹಿವಾಟು ಕರ್ನಾಟಕದ ಮನೆ ಮನೆಯಲ್ಲಿ ಮಾತನಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 4750 ಕೋಟಿಯಲ್ಲಿ ಶೇಕಡ 40 ಅಂದರೆ ಎಷ್ಟು ಆಗುತ್ತದೆ ಎಂಬುದನ್ನು ಕೂಡ ಶಾಸಕರು ಲೆಕ್ಕ ನೀಡಿದರೆ ಮತದಾರನಿಗೆ ಸುಲಭ ಆಗುತ್ತದೆ ಎಂದವರು ಹೇಳಿದ್ದಾರೆ.

4750 ಕೋಟಿ ರೂ. ಮೊತ್ತದ ಕಾಮಗಾರಿ ಆಗಿದ್ದರೆ ನಗರದ ಪ್ರತಿಯೊಬ್ಬನಿಗು ಅದು ಅನುಭವಕ್ಕೆ ಬರುತಿತ್ತು. ಹಾಗೇನು ಆಗಿಲ್ಲ. ಇಷ್ಟೊಂದು ಮೊತ್ತದ ಕಾಮಗಾರಿಗಳ ವಿವರವನ್ನು ಶಾಸಕರು ಜನರ ಮುಂದಿಡಲಿ. ಜನರಿಗೆ ಇವರ ಅಭಿವೃದ್ಧಿ ಕೆಲಸದ ಸತ್ಯಾಸತ್ಯತೆ ಗೊತ್ತಾಗಲಿ ಎಂದವರು ಹೇಳಿದ್ದಾರೆ.

ಕುಕ್ಕರ್ ಸ್ಟೋಟದಿಂದ ಗಾಯಗೊಂಡು ಆಸ್ಪತೆಗೆ ದಾಖಲಾಗಿದ್ದ ಆಟೋ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಸರಕಾರದ ವತಿಯಿಂದ ಯಾಕೆ ಪರಿಹಾರ ನೀಡಲಾಗಿಲ್ಲ.ರಸ್ತೆ ಅವಘಡದಲ್ಲಿ ಅನ್ಯಾಯವಾಗಿ ಸಾವನ್ನಪ್ಪಿದ ಯುವಕರ ಸಾವಿಗೆ ನ್ಯಾಯ ಕೊಡುವವರು ಯಾರು. ರಸ್ತೆ ಗುಂಡಿಗಳನ್ನು ಮುಚ್ಚದೆ ಜನರ ಪಾಲಿಗೆ ಮರಣ ಗುಂಡಿ ಮಾಡಿರುವುದೇ ಇವರ ದೊಡ್ಡ ಸಾಧನೆ ಎಂದವರು ಟೀಕಿಸಿದ್ದಾರೆ.
ಬಡವರು, ನಿರ್ಗತಿಕ ಕುಟುಂಬಗಳಿಗೆ ಎಷ್ಟು ಮನೆ ನೀಡಿದ್ದಾರೆ ಎಂದು ಶಾಸಕರು ಮಾಹಿತಿ ನೀಡಲಿ ಎಂದು ಸಂತೋಷ್ ಕಾಮತ್ ಸವಾಲ್ ಹಾಕಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆಯನ್ನು ಕೇವಲ ಕೆಲವು ವಾರ್ಡುಗಳಿಗಷ್ಟೇ ಸೀಮಿತ ಮಾಡಿದಲ್ಲದೆ ಸಾರ್ವಜನಿಕರ ಹಣವನ್ನು ಪೆÇೀಲು ಮಾಡಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ದೊಡ್ಡ ಪ್ರಮಾಣದ ಗೋಲ್ ಮಾಲ್ ನಡೆದಿರುವುದನ್ನು ಜನಸಾಮನ್ಯರು ಕೂಡ ಮಾತನಾಡುತ್ತಿದ್ದಾರೆ ಎಂದವರು ಟೀಕಿಸಿದ್ದಾರೆ.

Related Posts

Leave a Reply

Your email address will not be published.