ಇಂದು “ಶಕಲಕ ಬೂಂ ಬೂಂ” ತುಳು ಚಿತ್ರ ಕರಾವಳಿಯಾದ್ಯಂತ ಬಿಡುಗಡೆ

ಮಂಗಳೂರು: “ಶಕಲಕ ಬೂಂ ಬೂಂ” ತುಳು ಚಲನಚಿತ್ರ ಶುಕ್ರವಾರ ನಗರದ ಬಿಗ್ ಸಿನೆಮಾಸ್ ನಲ್ಲಿ ಬಿಡುಗಡೆಯಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತಾಡಿದ ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು, “ಈಗ ತುಳು ಚಿತ್ರಕ್ಕೆ ಪರ್ವ ಕಾಲ. ಹೊಸ ಹೊಸ ತುಳು ಸಿನಿಮಾಗಳು ಬಿಡುಗಡೆಯಾಗುತ್ತಿರುವುದು ಸಂತಸದ ವಿಚಾರ. ತುಳುವರು ಚಿತ್ರ ನೋಡಿ ಪ್ರೋತ್ಸಾಹ ಕೊಡಬೇಕು” ಎಂದರು.

ಬಳಿಕ ಮಾತಾಡಿದ ಪ್ರಕಾಶ್ ಪಾಂಡೇಶ್ವರ್ ಅವರು, “ಶಕಲಕ ಬೂಂ ಬೂಂ ಚಿತ್ರದ ಟೈಟಲ್ ವಿಭಿನ್ನವಾಗಿದ್ದು ಸಿನಿಮಾ ಮಂದಿರಕ್ಕೆ ಜನರನ್ನು ಸೆಳೆಯುವುದರಲ್ಲಿ ಸಂಶಯವಿಲ್ಲ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು” ಎಂದರು.ವೇದಿಕೆಯಲ್ಲಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಪ್ರಕಾಶ್ ಪಾಂಡೇಶ್ವರ, ಚೈತ್ರ ಶೆಟ್ಟಿ, ಮಿಮಿಕ್ರಿ ಶರಣ್, ತ್ರಿಶೂಲ್, ಲಕ್ಷ್ಯ ಶೆಟ್ಟಿ ಉಪಸ್ಥಿತರಿದ್ದರು. ಯತೀಶ್ ಕಾರ್ಯಕ್ರಮ ನಿರೂಪಿಸಿದರು..
