HomeFresh Newsಸ್ಥಳದಲ್ಲಿ ನಿಲ್ಲಿಸಿದ್ದ ಪಿಕ್ ಆಪ್ ಟೆಂಪೊಕ್ಕೆ ಬಸ್ಸು ಡಿಕ್ಕಿ ಒಬ್ಬ ಮೃತ್ಯು

ಸ್ಥಳದಲ್ಲಿ ನಿಲ್ಲಿಸಿದ್ದ ಪಿಕ್ ಆಪ್ ಟೆಂಪೊಕ್ಕೆ ಬಸ್ಸು ಡಿಕ್ಕಿ ಒಬ್ಬ ಮೃತ್ಯು

ಪೆರ್ಲ : ಅಡಿಕೆ ಸಸಿಗಳನ್ನು ಹೇರಿಕೊಂಡು ಬರುವ ನಡುವೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಪಿಕ್ ಆಪ್ ಟೆಂಪೊಕ್ಕೆ ಕರ್ನಾಟಕ ಸಾರಿಗೆ (ಕೆ ಎಸ್ ರ್ ಟಿ ಸಿ) ಬಸ್ಸು ಡಿಕ್ಕಿಯಾಗಿ ಪಿಕ್ ಆಪ್ ಚಾಲಕ ದಾರುಣವಾಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಇಂದು (ಮಂಗಳವಾರ) ಬೆಳಗ್ಗೆ 9.15 ಗಂಟೆಯ ಸುಮಾರಿಗೆ ಅಡ್ಕಸ್ಥಳ ಗಡಿ ಭಾಗದಲ್ಲಿ ಈ ಅಪಘಾತ ಸಂಭವಿಸಿದ್ದು ಮಣಿಯಂಪಾರೆ ನಿವಾಸಿ ಮುಸ್ತಾಫ ಪಿ.ಎ. ಪಜ್ಜಾನ (43) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ಎದುರಿನಿಂದ ಬಂದ ಕಾರೊಂದನ್ನು ತಪ್ಪಿಸುವ ರಭಸದಲ್ಲಿ ಕೆ ಎಸ್ ರ್ ಟಿ ಸಿ ಬಸ್ಸು ಪಿಕ್ ಆಪ್ ಗೆ ಬಡಿದಿದ್ದು ತಲೆಗೆ ತೀವ್ರ ಗಾಯಗೊಂಡಿರುವ ಮುಸ್ತಫಾರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ದರು ಜೀವ ಉಳಿಸಲಾಗಿಲ್ಲ. ಇವರು ಸಹ ಕೆಲಸಗಾರರೊಂದಿಗೆ ಅಡಿಕೆ ಸಸಿ ತರಲು ತೆರಳಿರುವ ವೇಳೆ ಈ ದುರ್ಘಟನೆ ಸಂಭವಿಸಿದ್ದು ಜತೆಗಿದ್ದ ಇನ್ನೊರ್ವರಿಗೂ ಗಾಯಗಳಾಗಿರುವ ಬಗ್ಗೆ ತಿಳಿದು ಬಂದಿದೆ. ಬದಿಯಡ್ಕ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments