HomeFresh Newsಆಕಾಶ್ ಬೈಜೂಸ್ ಸಂಸ್ಥೆಯಿಂದ ಎನ್‍ಇಇಟಿ, ಜೆಇಇ ಕೋಚಿಂಗ್

ಆಕಾಶ್ ಬೈಜೂಸ್ ಸಂಸ್ಥೆಯಿಂದ ಎನ್‍ಇಇಟಿ, ಜೆಇಇ ಕೋಚಿಂಗ್

ಶಿಕ್ಷಣದಲ್ಲಿ ಹೆಣ್ಣು ಮಗುವಿಗೂ ನ್ಯಾಯ ಸಿಗಬೇಕು ಹಾಗೂ ಸಬಲೀಕರಣಗೊಳ್ಳಬೇಕು ಎಂಬ ಕಾರಣಕ್ಕೆ ಆಕಾಶ್ ಬೈಜೂಸ್ ಎಲ್ಲರಿಗೂ ಶಿಕ್ಷಣವನ್ನು ಪ್ರಾರಂಭಿಸಿದೆ. ಎಎನ್‍ಟಿಎಚ್‍ಇ 2022ರ ಭಾಗವಾಗಿ ಸುಮಾರು 2,000 ಹಿಂದುಳಿದ ವಿದ್ಯಾರ್ಥಿನಿಯರಿಗೆ ಉಚಿತ ಎನ್‍ಇಇಟಿ ಮತ್ತು ಜೆಇಇ ಕೋಚಿಂಗ್ ಮತ್ತು ವಿದ್ಯಾರ್ಥಿ ವೇತನವನ್ನು ನೀಡಲು ಮುಂದಾಗಿದ್ದು, ಅದಕ್ಕಾಗಿಯೇ ರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿ ವೇತನ ಪರೀಕ್ಷೆ ನಡೆಸಲಿದೆ ಎಂದು ಆಕಾಶ್ ಬೈಜೂಸ್ ಅಕಾಡೆಮಿಯ ಏರಿಯಾ ಬಿಸ್‍ನೆಸ್ ಹೆಡ್ ವಿಶ್ವನಾಥ್ ಪಿಜಿ ಹೇಳಿದರು.

ಅವರು ನಗರದಲ್ಲಿ ಆಕಾಶ್ ಬೈಜೂಸ್ ಸಂಸ್ಥೆಯಿಂದ ಎನ್‍ಇಇಟಿ, ಜೆಇಇ ಉಚಿತ ಕೋಚಿಂಗ್ ಮತ್ತು ಸ್ಕಾಲರ್‍ಶಿಲ್ ಬಗ್ಗೆ ಮಾಹಿತಿ ನೀಡಿದರು. ಆಕಾಶ್ ಬೈಜೂಸ್‍ನ್ನು ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಹೆಣ್ಣು ಮಕ್ಕಳಿಗೆ, ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಒಂದು ಹೆಣ್ಣು ಮಗು ಅಥವಾ ಒಂಟಿ ಪೋಷಕ ಇರುವ ಕುಟುಂಬಗಳಿಗೆ ಅನುಕೂಲವಾಗುವಂತೆ ಈ ಅಭಿಯಾನವನ್ನು ಆರಂಭಿಸಲಾಗಿದೆ ಎಂದರು.

ಆಕಾಶ್ ಬೈಜೂಸ್ ಅಕಾಡೆಮಿಯ ಅಸಿಸ್ಟೆಂಟ್ ಡೈರೆಕ್ಟರ್ ಶ್ಯಾಮ್‍ಪ್ರಸಾದ್ ಅವರು ಮಾತನಾಡಿ ಎಲ್ಲರಿಗೂ ಶಿಕ್ಷಣ ಎಂಬ ಅಭಿಯಾನದ ವಿದ್ಯಾರ್ಥಿವೇತವನ್ನು ಸಾಮಾನ್ಯ ಎಎನ್‍ಟಿಎಚ್‍ಇ ವಿದ್ಯಾರ್ಥಿ ವೆತನದೊಂದಿಗೆ ಹೆಚ್ಚುವರಿಯಾಗಿ ಸೇರಿಸಲಾಗಿದೆ, ಹಿಂದಿನಂತೆ ಎಎನ್‍ಟಿಎಚ್‍ಇ 2022ರ 13ನೇ ಆವೃತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೇ.100ರ ತನಕ ವಿದ್ಯಾರ್ಥಿವೇತನ ನೀಡುತ್ತದೆ ಮತ್ತು ಉತ್ತಮ ಅಂಕ ಪಡೆದವರಿಗೆ ನಗದು ಬಹುಮಾನವನ್ನು ನೀಡಲಾಗುತ್ತದೆ ಎಂದ ಅವರು ಆಂಥೆ ಸ್ಕಾಲರ್‍ಶಿಪ್ ಬಗ್ಗೆ ಮಾಹಿತಿ ನೀಡಿದರು.

ಇದೇ ವೇಳೆ ಆಂಥೆ – ಆಕಾಶ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಎಕ್ಸಾಮ್‍ನ ಪೋಸ್ಟರನ್ನು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಆಕಾಶ್ ಬೈಜೂಸ್ ಪಬ್ಲಿಕ್ ರಿಲೇಶನ್ ಕಮ್ಯುನಿಕೇಶನ್‍ನ ಅಫೀಸರ್ ವರುಣ್ ಸೊನಿ, ಶಾಖೆಯ ವ್ಯವಸ್ಥಾಪಕರಾದಂತಹ ಪರಮೇಶ್ವರ್ ಬೆಹರಾ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments