ಪ್ರಖರ ಎಲ್‌ಇಡಿ ಬೆಳಕು ಹಾಕಿ ದಂಡಕ್ಕೆ ಸಿಗಬೇಡಿ: ಪೋ.ಮ.ನಿ.ಅಲೋಕ್‌ಕುಮಾರ್ ಎಚ್ಚರಿಕೆ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೆಳಕು ಚೆಲ್ಲುವ ಎಲ್‌ಇಡಿ ಬೆಳಕುಗಳೊಡನೆ ವಾಹನಗಳು ಸಂಚರಿಸುತ್ತಿದ್ದು, ಇದು ಎದುರು ಬದಿಯ ವಾಹನಗಳವರನ್ನು ಕಕ್ಕಾಬಿಕ್ಕಿ ಮಾಡಿ ಅಪಘಾತಕ್ಕೆ ಕಾರಣ ಆಗುತ್ತಿವೆ. ಇದನ್ನು ಮುಂದುವರಿಸಿದರೆ ದಂಡ ವಿಧಿಸಲಾಗುವುದು ಎಂದು ಅಲೋಕ್ ಕುಮಾರ್ ಎಚ್ಚರಿಕೆ ನೀಡಿದರು.
ಕರ್ನಾಟಕದ ಸಂಚಾರ ಮತ್ತು ರಸ್ತೆ ಸುರಕ್ಷತಾ ವ್ಯವಸ್ಥೆಯ ಹೆಚ್ಚುವರಿ ಪೋಲೀಸು ಮಹಾನಿರ್ದೇಶಕ ಅಲೋಕ್ ಕುಮಾರ್ ಅವರು ಎಲ್ಲ ಪೋಲೀಸು ಇಲಾಖೆಯವರಿಗೆ ಮತ್ತು ವಾಹನ ಹೊಂದಿರುವವರಿಗೆ ಮಾಹಿತಿ ರೂಪದ ಎಚ್ಚರಿಕೆ ನೀಡಿದ್ದಾರೆ. ಎಲ್ಲ ವಾಹನ ಚಾಲಕ ಮಾಲಕರು ಮೋಟಾರು ವಾಹನ ಕಾಯ್ದೆಯಲ್ಲಿ ಹೇಳಿರುವ ನಿಯಮಾವಳಿ ಮಾದರಿಯ ಬೆಳಕಿನ ವ್ಯವಸ್ಥೆಯನ್ನು ಮಾತ್ರ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅವರ ಮೇಲೆ ಐಎಂವಿ ಕಾಯ್ದೆಯ ಕಲಂ 177ರಡಿ ಮೊಕದ್ದಮೆ ದಾಖಲಿಸಲಾಗುತ್ತದೆ ಅಲ್ಲದೆ ದಂಡ ವಿಧಿಸಲಾಗುತ್ತದೆ.
ವಾಹನಗಳವರು ಕೂಡಲೆ ನಿಯಮ ಪಾಲಿಸಬೇಕು. ರಾಜ್ಯದ ಎಲ್ಲ ಘಟಕಗಳ ಪೋಲೀಸರು ಭಾರತೀಯ ಮೋಟಾರು ವಾಹನ ಕಾಯ್ದೆ ಮೀರಿ ಪ್ರಖರ ಬೆಳಕು ಹಾಕಿಕೊಂಡು ಓಡಾಡಿದಲ್ಲಿ ಅಂತಾವರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ಕ್ರಮ ಜರುಗಿಸುವಂತೆ ಅಲೋಕ್ ಕುಮಾರ್ ಸೂಚಿಸಿದ್ದಾರೆ.
