ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಹಾಗೂ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಆಶ್ರಯದಲ್ಲಿ “ಅರೆಭಾಷೆ ಸಾಂಸ್ಕೃತಿಕ ಸಂಭ್ರಮ – 2026” ಕಾರ್ಯಕ್ರಮ ಮೇ 6ರಂದು ಸ್ಪರ್ಶಾ ಕಲಾಮಂದಿರ ನಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಕೀಲ ಉಮೇಶ್ ಕುಮಾರ್ ವೈ ವಹಿಸಿದ್ದರು. ವೇದಿಕೆಯಲ್ಲಿ ಅಶ್ವನಿ ಕುಮಾರ್ ರೈ, ಕೆ. ಸುಂದರ ಗೌಡ ನಡುಬೈಲು, ಸಿ. ಕುಶಾಲಪ್ಪ ಗೌಡ, ಪುರಂದರ ಗೌಡ, ಲಿಂಗಪ್ಪ ಗೌಡ ಅಳಿಕೆ ಸೇರಿದಂತೆ ಅಕಾಡೆಮಿ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ, ಲತಾಪ್ರಸಾದ್ ಕುದ್ಪಾಜೆ ಮತ್ತು ಕಾರ್ಯಪ್ಪ ಪಿ.ಎಸ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತೇವು ತಾರನಾಥ ಕೊಟ್ಟಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜ್ಞಾನೇಶ್ ಎನ್.ಎ ಸ್ವಾಗತಿಸಿ, ಧರ್ಮಾವತಿ ಪಿ.ಬಿ ವಂದಿಸಿದರು. ಪೂಜಾಶ್ರೀ ವಿತೇಶ್ ಕೋಡಿ ಕಾರ್ಯಕ್ರಮ ನಿರೂಪಿಸಿದರು.
ಸಭೆಯ ನಂತರ ಯಶವಂತ ಕುಡೇಕಲ್ಲು ಅವರ ಅಧ್ಯಕ್ಷತೆಯಲ್ಲಿ ಅರೆಭಾಷೆ ಕವಿಗೋಷ್ಠಿ ನಡೆಯಿತು. ಉದಯ ಭಾಸ್ಕರ್ ಸುಳ್ಯ, ಕುಸುಮಾಕರ ಅಂಬೆಕಲ್ಲು, ಜೀವನ್ ಪುರ ಮರ್ಕಂಜ, ಚಂದ್ರಾವತಿ ಬಡ್ಡಡ್ಕ, ಹೇಮಲತಾ ಕಜೆಗದ್ದೆ ಹಾಗೂ ಡಾ. ತಾರಾ ಗಣೇಶ್ ತಮ್ಮ ಕವನಗಳನ್ನು ವಾಚಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅರೆಭಾಷೆ ನೃತ್ಯ, ಸಿದ್ಧವೇಶ, ಅರೆಭಾಷೆ ಹಾಡು, “ಕೆರೆಗೆದಾನ” ನೃತ್ಯರೂಪಕ ಹಾಗೂ “ಪೊಳ್ಮೆ” ಕಾರ್ಯಕ್ರಮಗಳು ಪ್ರೇಕ್ಷಕರ ಮನಗೆದ್ದವು. ಕಾರ್ಯಕ್ರಮದ ಸಂಯೋಜನೆಯನ್ನು ಲತಾಪ್ರಸಾದ್ ಕುದ್ಪಾಜೆ ನಿರ್ವಹಿಸಿದರು.
ಈ ಕಾರ್ಯಕ್ರಮವು ಕರಾವಳಿ ಕಲೋತ್ಸವ 2026 ಅಂಗವಾಗಿ ಆಯೋಜಿಸಲ್ಪಟ್ಟಿದ್ದು, ತುಳು, ಕೊಂಕಣಿ, ಬ್ಯಾರಿ ಹಾಗೂ ಅರೆಭಾಷೆ ಅಕಾಡೆಮಿಗಳ ಸಹಭಾಗಿತ್ವದಲ್ಲಿ ಬಹುಸಂಸ್ಕೃತಿ ಉತ್ಸವ ಮತ್ತು ಆಹಾರ ಮೇಳದ ರೂಪದಲ್ಲಿ ಆರು ದಿನಗಳ ಕಾಲ ನಡೆಯುತ್ತಿದೆ.
