ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ 2023

ತುಳು ವಿದ್ವಾಂಸ, ಸಂಶೋಧಕ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್ ಇವರಿಗೆ 2022-23 ಸಾಲಿನ ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿಯನ್ನು ತುಳು ಸಾಹಿತ್ಯ ಕ್ಷೇತ್ರಕ್ಕೆ ಅಗಾಧ ಕೊಡುಗೆ ನೀಡಿದ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್ ಇವರು ಸ್ವೀಕರಿಸಲಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 05, ಜನವರಿ 2023ರಂದು ಕೆನರಾ ಪ್ರೌಢಶಾಲೆ ಡೊಂಗರಕೇರಿಯ ಭುವನೇಂದ್ರ ಸಭಾಂಗಣದಲ್ಲಿ ಸಂಜೆ ಸರಿಯಾಗಿ 4:30ಕ್ಕೆ ಜರುಗಲಿದೆ. ಉತ್ತಮ ಶಿಕ್ಷಕ, ಅಪ್ರತಿಮ ವಾಗ್ಮಿ ಹಾಗೂ ಅನೇಕ ಕಲೆಗಳ ಆಗರವಾದ ಶ್ರೀಯುತ ಬೈಕಾಡಿ ಜನಾರ್ದನ ಆಚಾರ್ ಇವರ ನೆನಪಿನಲ್ಲಿ ಬೈಕಾಡಿ ಪ್ರತಿಷ್ಠಾನ (ರಿ.) ಪ್ರತೀ ವರ್ಷ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಿರಿಯರನ್ನು ಸನ್ಮಾನಿಸುತ್ತಾ ಬಂದಿದೆ. ಬೈಕಾಡಿ ಜನಾರ್ದನ ಆಚಾರ್ ಇವರ ಧ್ಯೇಯೋದ್ದೇಶಗಳನ್ನು ಮುಂದಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿರುವ ಬೈಕಾಡಿ ಪ್ರತಿಷ್ಠಾನ (ರಿ.) ಲಲಿತ ಕಲೆಗಳ ಪ್ರೋತ್ಸಾಹಕ್ಕಾಗಿ ಕಳೆದ 2 ವರ್ಷಗಳಿಂದ ದುಡಿಯುತ್ತಾ ಬಂದಿದೆ
