ಗೋ ಶಾಲೆಯು ವೃದ್ಧಾಶ್ರಮ, ಆಸ್ಪತ್ರೆಯಂತಾಗದಿರಲಿ : ಅದಮಾರು ಶ್ರೀ

ಗೋ ಶಾಲೆ ಎಂಬುದು ನೋಡುಗರಿಗೆ ನಾವು ಕೂಡಾ ಎರಡು ದನಗಳನ್ನು ಸಾಕಿ ಅದರಿಂದ ಪ್ರಯೋಜನವನ್ನು ಪಡೆಯಬೇಕು. ಮತ್ತೊಬ್ಬರಿಗೆ ದನಗಳನ್ನು ಸಾಕುವುದಕ್ಕೆ ಪ್ರಚೋದನೆ ನೀಡುವಂತ್ತಿರ ಬೇಕೇ ವಿನಃ ವೃದ್ಧಾಶ್ರಮ ಸಹಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಂತಾಗಬಾರದು ಎಂದು ಅದಮಾರು ಮಠದ ಕಿರಿಯ ಶ್ರೀಗಳಾದ ಈಶ ಪ್ರಿಯ ತೀರ್ಥರು ಹೇಳಿದ್ದಾರೆ.
ಅವರು ಎಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ನೇತ್ರತ್ವದಲ್ಲಿ ನಡೆದ ಗೋವು ಪೂಜೆ ಹಾಗೂ ಗೋವು ರುದ್ರ ಭೂಮಿ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಪ್ರಾಣಿಗಳಿಗೆ ನಾವು ಒಂದಿಷ್ಟು ಪ್ರೀತಿಯನ್ನು ತೋರಿದರೆ ಅದು ನಮಗೆ ಪ್ರತಿಯಾಗಿ ಬೆಟ್ಟದಷ್ಟು ಪ್ರೀತಿ ತೋರುಸುತ್ತದೆ. ಇಲ್ಲಿ ಗೋವು ಶಾಲೆಗಾಗಿ ಮೀಸಲಿಸಿದ ಸರ್ಕಾರ ಸ್ಥಳವಿದ್ದು, ಗೋವು ಶಾಲೆಗಾಗಿ ಬಿಡುಗಡೆಗೊಂಡಿದ್ದ ಐವತ್ತು ಲಕ್ಷ ರೂಪಾಯಿ ಸರ್ಕಾರದ ತಾಂತ್ರಿಕ ಕಾರಣದಿಂದ ತಡೆಯಾಗಿದ್ದು, ವಿಳಂಬವಾಗಿಯಾದರೂ ಈ ಭಾಗದಲ್ಲಿ ತಾಲೂಕಿಗೆ ಒಂದೇ ಎಂಬಂತೆ ಗೋವು ಶಾಲೆ ನಿರ್ಮಿಸಿಯೇ ಸಿದ್ದ, ಸರ್ಕಾರದ ಅನುಧಾನ ಅಲ್ಲವಾದರೂ ಶಾಸಕರ ನಿಧಿ ಇಲ್ಲವೆ ನನ್ನ ಮಿತ್ರರು, ಹಿತ್ತೈಸಿಗಳಿಂದ ಬೇಡಿಯಾದರೂ ಗೋವು ಶಾಲೆ ನಿರ್ಮಿಸಲಾಗುವುದು ಬಳಿಕ ಗೋವು ರುದ್ರಭೂಮಿ ನಿರ್ಮಿಸಲಾಗುವುದೆಂದರು.
ಈ ಸಂದರ್ಭ ಮಾಜಿ ಶಾಸಕ ಲಾಲಾಜಿ ಮೆಂಡನ್, ತಹಶಿಲ್ದಾರ್ ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ಗೋವು ವೈದ್ಯಾಧಿಕಾರಿ ಅರುಣ್ ಕುಮಾರ್ ಹೆಗ್ಡೆ, ಆರ್ ಐ, ಸುಧೀರ್, ಮಾಜಿ ಜಿ.ಪಂ. ಸದಸ್ಯೆ ಶಿಲ್ಪಾ ಸುವರ್ಣ, ತಾ.ಪಂ. ಸದಸ್ಯ ಕೇಶವ ಮೊಯಿಲಿ, ಜಯಂತ್ ಕುಮಾರ್ ಮುಂತಾದವರಿದ್ದರು.
