HomeFresh Newsಬಂಟ್ವಾಳಕ್ಕೆ ಭೇಟಿ ನೀಡಿದ 13 ದೇಶಗಳ ರೋಟರಿ ಸದಸ್ಯರು

ಬಂಟ್ವಾಳಕ್ಕೆ ಭೇಟಿ ನೀಡಿದ 13 ದೇಶಗಳ ರೋಟರಿ ಸದಸ್ಯರು

ಬಂಟ್ವಾಳ: ರೈಡ್ ಫಾರ್ ರೋಟರಿ ಕಾರ್ಯಕ್ರಮದಂಗವಾಗಿ 13 ದೇಶಗಳ 41 ಮಂದಿ ರೋಟರಿ ಸದಸ್ಯರು ಬಂಟ್ವಾಳ ರೋಟರಿ ಕ್ಲಬ್‍ಗೆ ಭೇಟಿ ನೀಡಿದರು.ಬೈಕ್ ನಲ್ಲಿ ಆಗಮಿಸಿದ ರೋಟರಿ ಸದಸ್ಯರನ್ನು ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಪುಷ್ಪರಾಜ ಹೆಗ್ಡೆ ಮತ್ತವರ ತಂಡ ಬಿ.ಸಿ.ರೋಡಿನ ರೋಟರಿ ಸಭಾಂಗಣದ ಬಳಿ ಬರಮಾಡಿಕೊಂಡರು.

ಬಳಿಕ ನಡೆದ ಜಂಟಿ ಸಭೆಯಲ್ಲಿ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಅವರು ರೋಟರಿ ಕ್ಲಬ್ ಬಂಟ್ವಾಳದ ಕಾರ್ಯಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭ ವಿದೇಶಿ ರೋಟರಿ ಸದಸ್ಯರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ರೈಟ್ ಫಾರ್ ರೋಟರಿ ಚೇರ್ ಮನ್ ಕೃಷ್ಣ ನಾರಾಯಣ್ ಮುಳಿಯ ಮಾತನಾಡಿದರು. ವೇದಿಕೆಯಲ್ಲಿ ಸಹಾಯಕ ಗವರ್ನರ್ ಮಂಜುನಾಥ ಆಚಾರ್ಯ, ರೈಟ್ ಫಾರ್ ರೋಟರಿ ಕಾರ್ಯದರ್ಶಿ ಪಶುಪತಿ ಶರ್ಮ, ಉಪಸ್ಥಿತರಿದ್ದರು. ರೋಟರಿ ಕ್ಲಬ್ ಬಂಟ್ವಾಳದ ಕಾರ್ಯದರ್ಶಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments