HomeFresh Newsಬಿಸಿರೋಡು-ಪುಂಜಾಲಕಟ್ಟೆ ರಾಷ್ಟಿಯ ಹೆದ್ದಾರಿ ರಸ್ತೆ ಕಾಮಗಾರಿ : ಅಪಘಾತ ಸ್ಥಳಗಳಿಗೆ ಬಂಟ್ವಾಳ ಶಾಸಕ ರಾಜೇಶ್ ...

ಬಿಸಿರೋಡು-ಪುಂಜಾಲಕಟ್ಟೆ ರಾಷ್ಟಿಯ ಹೆದ್ದಾರಿ ರಸ್ತೆ ಕಾಮಗಾರಿ : ಅಪಘಾತ ಸ್ಥಳಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಭೇಟಿ

ಬಂಟ್ವಾಳ: ಬಿಸಿರೋಡು-ಪುಂಜಾಲಕಟ್ಟೆ ರಾಷ್ಟಿಯ ಹೆದ್ದಾರಿ ರಸ್ತೆ ಕಾಮಗಾರಿ ಸಂಪೂರ್ಣ ವಾದ ಬಳಿಕ ಕೆಲವೊಂದು ಆಯಕಟ್ಟಿನ ಸ್ಥಳದಲ್ಲಿ ಅಪಘಾತಗಳು ನಡೆಯುತ್ತಿದ್ದು, ಈ ಸ್ಥಳಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರು ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

highway work

ಬಂಟ್ವಾಳ ಬೈಪಾಸ್ ರಸ್ತೆ, ಜಕ್ರಿಬೆಟ್ಟು, ಚೆಂಡ್ತಿಮಾರ್ ಈ ಮೂರು ಕಡೆಗಳಿಗೆ ಶಾಸಕ ರಾಜೇಶ್ ನಾಯಕ್ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಅಗತ್ಯವಾಗಿ ಆಗಬೇಕಾದ ಕಾರ್ಯಗಳನ್ನು ಶೀಘ್ರವಾಗಿ ಮಾಡುವಂತೆ ತಿಳಿಸಿದರು. ಇತ್ತೀಚಿಗೆ ಅಪಘಾತ ನಡೆದು ಪ್ರಾಣಹಾನಿಯಾದ ಸ್ಥಳಗಳಲ್ಲಿ ವಾಹನ ಸವಾರರಿಗೆ ಎಚ್ಚರಿಕೆಯ ದೃಷ್ಟಿಯಿಂದ ಸೂಚನ ಫಲಕಗಳು, ಸಿಗ್ನಲ್ ಲೈಟ್, ರಿಪ್ಲೆಕ್ಟರ್ ಅಳವಡಿಕೆ, ಸೈನ್ ಬೋರ್ಡ್ ಅಳವಡಿಕೆ ಮಾಡುವಂತೆ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಕಾರ್ಯದರ್ಶಿಗಳಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಪ್ರಮುಖರಾದ ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಸುದರ್ಶನ ಬಜ, ವಿಶ್ವನಾಥ ಚೆಂಡ್ತಿಮಾರ್, ಬಂಟ್ವಾಳ ಡಿ.ವೈ.ಎಸ್.ಪಿ. ಪ್ರತಾಪ್ ಸಿಂಗ್ ಥೋರಾಟ್, ಬಂಟ್ವಾಳ ನಗರ ಠಾಣಾ ಎಸೈ ಅವಿನಾಶ್, ಟ್ರಾಫಿಕ್ ಎಸೈ ಮೂರ್ತಿ, ಕೆ.ಎಸ್.ಆರ್.ಟಿ.ಸಿ.ಡಿಪೋ ಮ್ಯಾನೇಜರ್ ಶ್ರೀಶ ಭಟ್ ಎಇಇಗಳಾದ ಮಹಾಬಲ ನಾಯಕ್, ಕೀರ್ತಿ ಅಮೀನ್, ಗುತ್ತಿಗೆದಾರ ದಾಮೋದರ ಮತ್ತಿರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments