ಬೆಳುಪು ದೇವಿಪ್ರಸಾದ್ ಶೆಟ್ಟಿ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ..!
ಕಾಂಗ್ರೆಸ್ ಪಕ್ಷದ ಪ್ರತಿಷ್ಠಿಯ ತಾಣವಾಗಿರುವ ಕಾರ್ಕಳ ಕ್ಷೇತ್ರಕ್ಕೆ ಬಹಳ ಆಕಾಂಕ್ಷಿಗಳಿದ್ದರೂ ಅಂತಿಮವಾಗಿ ಬಹಳಷ್ಟು ಸಾಮಾಜಿಕ ರಾಜಕೀಯ ಕ್ಷೇತ್ರದಲ್ಲಿ ಕೈಯಾಡಿಸಿ ಯಶಸ್ವಿಯಾಗಿರುವ ಬೆಳಪು ದೇವಿಪ್ರಸಾದ್ ಶೆಟ್ಟಿ ಹೆಸರು ಅಂತಿಮವಾಗುವ ಮಾತು ರಾಜಧಾನಿಯಿಂದ ಕೇಳಿ ಬರುತ್ತಿದೆ.
ಒಂದು ಕಡೆಯಿಂದ ಗೋಪಾಲ ಭಂಡಾರಿಯವರಿಂದ ತೆರವಾಗಿದ್ದ ಸ್ಥಾನಕ್ಕೆ ಬಹಳಷ್ಟು ಆಕಾಂಕ್ಷಿಗಳ ಪಟ್ಟಿ ಇದ್ದರೂ…ಮತ್ತೊಂದು ಕಡೆ ನಾನು ಯಾವುದೇ ಕಾರಣಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂಬುದಾಗಿ ಕಾಪುವಿನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಬಹಿರಂಗ ಪಡಿಸಿದ್ದಾರೆ. ಇತ್ತೀಚಿನ ವಿದ್ಯಾಮಾನಗಳಲ್ಲಿ ಈ ಹಿಂದೆ ಪ್ರಬಲ ಆಕಾಂಕ್ಷಿಯಾಗಿದ್ದ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅಷ್ಟೇನೂ ಆಸಕ್ತಿ ತೋರಿಸುವಂತೆ ಕಾಣುತ್ತಿಲ್ಲ. ಮತ್ತೊಂದು ವಿದ್ಯಮಾನದಲ್ಲಿ ಹಾಲಿ ಸಚಿವರಾಗಿರುವ ಸುನೀಲ್ ಕುಮಾರ್ ರವರಿಗೆ ಸಡ್ಡು ಹೊಡೆಯಲೆಂದೋ ಏನೋ… ಪ್ರಮೋದ್ ಮುತಾಲಿಕ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಸಿದ್ದರಾಗಿದ್ದು ಇದರಿಂದ ಬಿಜೆಪಿ ಮತ ವಿಭಜನೆಯಾಗುವ ಸಾಧ್ಯತೆ ಇದೆ ಎಂಬ ಮಾತು ಕೂಡಾ ಕೇಳಿ ಬರುತ್ತಿದ್ದು ಇದನ್ನು ಅಲ್ಲಗಳೆಯುವಂತ್ತಿಲ್ಲ. ಅನಿಸಿದಂತೆ ನಡೆಯಿತು ಎಂದಾದರೆ ಇಲ್ಲಿ ಕಾಂಗ್ರೆಸ್ ಗೆ ಬಂಟ ಅಭ್ಯರ್ಥಿಯ ಅನಿವಾರ್ಯ ಸ್ಥಿತಿ ಇದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಈ ಎಲ್ಲವನ್ನೂ ಅಳೆದು ತೂಗಿದಾಗ ಬರುವ ಹೆಸರು ಬೆಳಪು ದೇವಿಪ್ರಸಾದ್ ಶೆಟ್ಟಿ ಹೆಸರು, ಇವರ ಆಯ್ಕೆಗೆ ಪ್ರಮುಖ ಕಾರಣ..ತೀರ ಹಿಂದುಳಿದ್ದ ಬೆಳಪು ಗ್ರಾಮ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡ ಬೇಕಾಗಿದ್ದರೆ ಅದರ ಮೂಲ ಸೂತ್ರಧಾರಿ ಇವರಾಗಿದ್ದು ಅದಲ್ಲದೆ, ಸಹಕಾರಿ ರಂಗ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಮುಂಚೂಣಿ, ಕಂಬಳ ಕ್ಷೇತ್ರದಲ್ಲಿ ಮಿಂಚಿರುವುದು ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಹೈ ಕಮಾಂಡ್ ಬೆಳಪು ದೇವಿಪ್ರಸಾದ್ ಶೆಟ್ಟಿಯವರ ಹೆಸರು ಅಂತಿಮ ಗೊಳಿಸಲಿದೆ ಎಂಬ ಮಾತು ಕೇಳಿ ಬರುತ್ತಿದೆ.