ಫೆ.27ರಂದು ತುಳು ಚಿತ್ರಮಾಲಾ ಪ್ರದರ್ಶನ

ಮಂಗಳೂರಿನ ಮಾಲೆಮಾರ್‍ನ ದೃಶ್ಯಾಲಯ ಸಂಚಯನ ಸಮಿತಿ ವತಿಯಿಂದ ತಮ್ಮ ಲಕ್ಷ್ಮಣ ಅವರ ತುಳು ಬೆಳ್ಳಿತೆರೆಯ ಸುವರ್ಣಯಾನ ಮತ್ತು ತುಳು ಚಿತ್ರರಂಗದ 50 ವರ್ಷಗಳ ಇತಿಹಾಸ ಗ್ರಂಥ ಕೃತಿ ಬಿಡುಗಡೆ ಸಮಾರಂಭ ಮತ್ತು ತುಳು ಚಿತ್ರಮಾಲಾ ಪ್ರದರ್ಶನ, ತುಳು ಚಿತ್ರರಂಗದ ಉನ್ನತಿಗೆ ಶ್ರಮಿಸಿದ ಹಿರಿಯ ಸಾಧಕರಿಗೆ ಗೌರವ ಪ್ರದಾನ ಕಾರ್ಯಕ್ರಮವು ಫೆ.27ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ಆಯೋಜಕರಾದ ರಾಜಶೇಖರ್ ಕೋಟ್ಯಾನ್ ಹೇಳಿದರು.

ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಫೆ.27ರಂದು ನಗರದ ಕುದ್ಮುಲ್ ರಂಗರಾವ್ ಪುರಭವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.ಇದೇ ವೇಳೆ ತುಳು ಚಿತ್ರರಂಗದ 50 ವರ್ಷಗಳ ಇತಿಹಾಸ ಗ್ರಂಥ ಕೃತಿ ಬಿಡುಗಡೆಯನ್ನು ಮಾಡಲಾಯಿತು.
ಆನಂತರ ತುಳು ಸಿನಿಮಾ ನಿದೇರ್ಶಕರಾದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ಸುಮಾರು 50 ವರ್ಷದ ಚಿತ್ರರಂಗದ ಪಯಣದಲ್ಲಿ ನಾವಿದ್ದೇವೆ. ಈ ಸುಸಂದರ್ಭದಲ್ಲಿ ತುಳು ಬೆಳ್ಳಿ ತೆರೆಯ ಸುವರ್ಣ ಯಾನದ ಕೃತಿಯನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ತುಳು ಚಿತ್ರರಂಗದ ಬಗ್ಗೆ ಎಲ್ಲಾ ಮಾಹಿತಿಗಳಿಗೆ ಎಂದು ಹೇಳಿದರು.ಈ ಸಂದರ್ಭದಲ್ಲಿ ತುಳು ಚಿತ್ರರಂಗದ ಸುವರ್ಣಕಾಲ ಕೃತಿಕಾರ ತಮ್ಮ ಲಕ್ಷ್ಮಣ್, ಸಚಿನ್, ಯಶರಾಜ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.