HomeFresh Newsಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಗೆ ಸತತ 9ನೇ ಬಾರಿ ಶೇ. 100 ಫಲಿತಾಂಶ

ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಗೆ ಸತತ 9ನೇ ಬಾರಿ ಶೇ. 100 ಫಲಿತಾಂಶ

ವರ್ಲ್ಡ್ ಸ್ಕಿಲ್ ಕೌನ್ಸಿಲ್ ನಿಂದ ಮಾನ್ಯತೆ ಪಡೆದಿರುವ, ಭಾರತ ಸರಕಾರದಿಂದ ಪ್ರವರ್ತಿತ ರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ ಭಾರತ್ ಸೇವಕ್ ಸಮಾಜದ ಅಂಗಿಕೃತ ಸಂಸ್ಥೆಯಾದ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ 2025-26ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ(ಡಿ. ಎಂ.ಇ.ಡಿ) ಫಲಿತಾಂಶ ಪ್ರಕಟಗೊಂಡಿದ್ದು, ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಪರೀಕ್ಷೆಗೆ ಹಾಜರಾದ ಎಲ್ಲಾ 28 ವಿದ್ಯಾರ್ಥಿ ಶಿಕ್ಷಕಿಯರು ಉತ್ತೀರ್ಣರಾಗುವ ಮೂಲಕ ಸತತವಾಗಿ 9ನೇ ಬಾರಿ ಶೇ.100 ಫಲಿತಾಂಶ ದಾಖಲಾಗಿದೆ. 25 ಮಂದಿ ವಿದ್ಯಾರ್ಥಿ ಶಿಕ್ಷಕಿಯರು ವಿಶಿಷ್ಟ ಶ್ರೇಣಿಯಲ್ಲಿ, ಮೂವರು ವಿದ್ಯಾರ್ಥಿ ಶಿಕ್ಷಕಿಯರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ರಚನಾ ಬಿ ಎನ್(1124), ರೇಷ್ಮಾ(1112), ಅಖಿಲಾ ಜೆ ಕೆ (1110), ತನುಶ್ರೀ ವಿ(1109), ಆದರ್ಶಿನಿ ಜಿ (1105), ಸಾಬಿರಾ ಕೆ (1105), ಅಸ್ನಾಝಿಯಾ(1099), ದಿವ್ಯಶ್ರೀ ಎನ್(1099), ಮಣಿಮಂಗಳದೇವಿ ಆರ್ (1094), ಲಲಿತಾ ವಿ (1091), ಧನ್ಯಶ್ರೀ ಆರ್ (1086), ಮಾಹಿನ್(1081)ನದಿಯಾ ಟಿ (1081), ತಾಹಿರಾ ಎಸ್ ಹೆಚ್(1080), ಪವಿತ್ರಾ ಕೆ (1076), ಚಿತ್ರಾ ಪಿ (1071), ವೇದಾವತಿ (1065), ಗೌತಮಿ ಆರ್ ಕೆ (1061), ದಿವ್ಯಾ ಪಿ (1059), ಎ ಅರುಣಾ ಕುಮಾರಿ(1055), ತೇಜಸ್ವಿನಿ(1049), ಆಯಿಷತ್ ರಂಸೀನಾ (1017), ಶ್ರೀಲತಾ ಹೆಚ್ ಎನ್ (1015), ಪೂಜಾಶ್ರೀ ಕೆ ಎ (996), ಶುಭಲತಾ ಎಂ (996), ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ರಶ್ಮಿ ಕೆ ಪಿ, ವಿಜೇತಾ ಎಂ, ಶ್ಯಾಮಲಾ ಬಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಂಸ್ಥೆಯಲ್ಲಿ 2026-27ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ ಪ್ರವೇಶಾತಿ ಆರಂಭಗೊಂಡಿದ್ದು, ಆಸಕ್ತರು ಸಂಸ್ಥೆಯ ಕಛೇರಿಯನ್ನು ಸಂಪರ್ಕಿಸಬಹುದು ಎಂದು ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments