HomeFresh Newsಬೆಳ್ತಂಗಡಿ: ಅಂಗಡಿಗಳಿಗೆ ನುಗ್ಗಿ ನಗದು ಕಳವು

ಬೆಳ್ತಂಗಡಿ: ಅಂಗಡಿಗಳಿಗೆ ನುಗ್ಗಿ ನಗದು ಕಳವು

ಬೆಳ್ತಂಗಡಿ ಬಸ್ ನಿಲ್ದಾಣದ ಸಮೀಪದ ಏಂಜಲ್ ಸ್ಟೋರ್ ಮತ್ತು ಗಿರಣಿ ಅಂಗಡಿಗೆ ನುಗ್ಗಿ ನಗದು ಕಳವು ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಬೆಳ್ತಂಗಡಿ ಪೋಲಿಸ್ ಠಾಣೆಯ ಕಾಂಪೌಂಡ್ ಗೋಡೆಗೆ ತಾಗಿರುವ ಏಂಜಲ್ ಸ್ಟೋರ್ ಮತ್ತು ಗಿರಣಿ ಅಂಗಡಿಗೆ ಶನಿವಾರ ರಾತ್ರಿ ಕಳ್ಳರು ನುಗ್ಗಿದ್ದು , ಹಿಂಬದಿಯ ಕಿಟಕಿ ಮುರಿದು , ಕಬ್ಬಿಣದ ರಾಡ್ ಎಬ್ಬಿಸಿ ಒಳನುಗ್ಗಿ , ಡ್ರವರ್ ನಲ್ಲಿದ್ದ ಸುಮಾರು 25,೦೦೦/- ರೂಪಾಯಿಗಳನ್ನು ಎಗರಿಸಿದ್ದಾರೆ. ಆದಿತ್ಯವಾರ ಬೆಳ್ತಂಗಡಿ ಅಂಗಡಿ ಬಾಗಿಲು ತೆರೆದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ ಎಂದು ಬೆಳ್ತಂಗಡಿ ಪೋಲಿಸರಿಗೆ ಅಂಗಡಿ ಮಾಲೀಕರಾದ ಆದರ್ಶ .ಜೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸ್ಥಳಕ್ಕೆ ಬೆಳ್ತಂಗಡಿ ಪೋಲಿಸರು ಭೇಟಿ ನೀಡಿ, ಸ್ಥಳೀಯ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments