ಶೋಷಿತ ಸಮುದಾಯವನ್ನು ಮತ್ತಷ್ಟು ಶೋಷಿಸುವ ಕಾರ್ಯಕ್ಕೆ ಶಾಸಕರು ಮುಂದಾಗಿದ್ದಾರೆ: ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಎಸ್.ವೈ ಗುರುಶಾಂತ್

ಬೆಳ್ತಂಗಡಿ; ಆದಿವಾಸಿವಸಮುದಾಯದ ಮುಖಂಡ ಜಯಾನಂದ ಪಿಲಿಕಳ ಅವರ ಮೇಲೆ ಶಾಸಕರು ದಬ್ಬಾಳಿಕೆ ನಡೆಸಿ ಅವಮಾನ ಮಾಡಿ ಹಲ್ಲೆ ಮಾಡುವುದಾಗಿ ಸಾರ್ವಜನಿಕವಾಗಿ ಬೆದರಿಸಿದ್ದು ಈ ಬಗ್ಗೆ ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿರುವುದನ್ನು ವಿರೋಧಿಸಿ ಮೂಲನಿವಾಸಿ ಮಲೆಕುಡಿಯರ ಸಂಘ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯ ಎದುರು ಸೋಮವಾರ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೆಶಿಸಿ ಮಾತನಾಡಿದ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಎಸ್.ವೈ ಗುರುಶಾಂತ್ ಶೋಷಿತ ಸಮುದಾಯವನ್ನು ಮತ್ತಷ್ಟು ಶೋಷಿಸುವ ಕಾರ್ಯಕ್ಕೆ ಶಾಸಕರು ಮುಂದಾಇಗಿದ್ದಾರೆ, ಜಯಾನಂದ ಮೇಲೆ ನಡೆದ ಹಲ್ಲೆ ಯತ್ನ ಸ್ವಾಭಿಮಾನಿ ಮಲೆಕುಡಿಯ ಸಮುದಾಯದ ನೇಲೆ ನಡೆದ ಧಾಳಿಯಾಗಿದೆ.ಶಾಸಕರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ.

ಸರಕಾರ ಕೂಡಲೇ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬಿಜೆಪಿಯಲ್ಲಿ ಕ್ರಿಮಿನಲ್ ಗಳೇ ತುಂಬಿದ್ದಾರೆ, ಅದನ್ನೇ ಬೆಳ್ತಂಗಡಿ ಯಲ್ಲಿ ತೋರಿಸುತ್ತಿದ್ದಾರೆ ಎಂದ ಅವರು ಅಧಿಕಾರ ಶಾಶ್ವತವಲ್ಲ ಹರೀಶ್ ಪೂಂಜ ಅವರೇ ನಿಮಗೆ ಜನರೇ ಮುಂದಿನ ದಿನಗಳಲ್ಲಿ ಉತ್ತರ ‌ನೀಡಲಿದ್ದಾರೆ ಎಂದರು. ಹೋರಾಟದ ಮುಂದಿನ ಭಾಗವಾಗಿಮಾನವ ಹಕ್ಕುಗಳ ಆಯೋಗಕ್ಕೆ, ರಾಷ್ಟ್ರಪತಿಯವರಿಗೆ ದೂರು ನೀಡುವ ಕಾರ್ಯವನ್ನು ಮಾಡುತ್ತೇವೆ ನ್ಯಾಯಕ್ಕಾಗಿ ಎಲ್ಲರೂ ಒಟ್ಟಾಗಿ ಧ್ವನಿಯೆತ್ತೋಣ ಎಂದರು.

ಮಾಜಿ ಸಚಿವ ಕೆ ಗಂಗಾಧರ ಗೌಡ ಮಾತನಾಡಿ ಪೊಲೀಸರು ಯಾವುದೋ ನಡಪಗಳನ್ನು ಹೇಳಿ ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆ ಶಾಸಕರ ಸರ್ವಾಧಿಕಾರಕ್ಕೆ ಬೆಂಬಲ ನೀಡುತ್ತಿರುವುದು ದುರಂತ ಪೊಲೀಸರು ನ್ಯಾಯಯುತವಾಗಿ ಕೆಲಸ ಮಾಡದಿದಕಾರಣ ಜನ ಬೀದಿಗಿಳಿಯಬೇಕಾದ ಅನಿವಾರ್ಯತೆ ಬರುತ್ತಿದೆ. ಈ ಹೋರಾಟವನ್ನು ನ್ಯಾಯ ಸಿಗುವ ವರೆಗೆ ಮುಂದುವರಿಸುವುದಾಗಿ ಪ್ರಕಟಿಸಿದರು.ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐ ಎಂ ಮುಖಂಡ ಶಿವಕುಮಾರ್, ಕಾರ್ಮಿಕ ಮುಖಂಡ ಬಿ‌ಎಂ ಭಟ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೇಲೇಶ್ ಕುಮಾರ್, ದಲಿದ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಬಿ.ಕೆ‌ವಸಂತ, ಮಲೆಕುಡಿಯ ಸಂಘದ ಮಾಜಿ ಅಧ್ಯಕ್ಷ ಜಯರಾಮ ಮಲೆಕುಡಿಯ, ಮಾತನಾಡಿ ಹೋರಾಟಕ್ಕೆ ಬೆಂಬಲ ಘೋಷಿಸಿದರು.ಪ್ರತಿಭಟನೆಯಲ್ಲಿಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ , ಮಾಜಿ ಜಿಲ್ಲಾ ಪಂಚಾಯತು ಸದಸ್ಯ ಶೇಖರ್ ಕುಕ್ಕೇಡಿ , ಮರಾಠಿ ನಾಯ್ಕ ಯುವ ವೇದಿಕೆ ಸ್ಥಾಪಕ , ನ್ಯಾಯವಾದಿ ಸಂತೋಷ್ ಕುಮಾರ್ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ ಗೌಡ , ಮುಖಂಡರಾದ ಮನೋಹರ ಕುಮಾರ್ , ಅಭಿನಂದನ್ ಹರೀಶ್ ಕುಮಾರ್, ಅಬ್ದುಲ್ ರಹಿಮಾನ್ವಪಡ್ಪು,ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ವಸಂತ ನಡ ,ಎಪಿಎಂಸಿ ಮಾಜಿ ಉಪಾಧ್ಯಕ್ಷ ಲಕ್ಷ್ಮಣ ಆಲಂಗಾಯಿ , ಮಲೆಕುಡಿಯ ಸಮುದಾಯದ ಪೂವಪ್ಪ ಮಲೆಕುಡಿಯ ಕುತ್ಲೂರು , ನವೀನ್ ಬಾಂಜಾರು , ನಾರಾಯಣ ಮಲೆಕುಡಿಯ , ಜಿ.ಕೆ ನಾರಾಯಣ ಧರ್ಮಸ್ಥಳ , ರಾಮಚಂದ್ರ ಶಿಶಿಲ , ಸುಕುಮಾರ್ ದಿಡುಪೆ , ಭೂನ್ಯಾಯ ಮಂಡಳಿ ಮಾಜಿ ಸದಸ್ಯ ನೀಲಯ್ಯ ಮಲೆಕುಡಿಯ , ವಸಂತ ಮಲೆಕುಡಿಯ ಸವಣಾಲು , ಚೇತನ್ ಮಲೆಕುಡಿಯ , ರಘು ಜಾಲಡೆ , ಅಶೋಕ್ ಎರ್ಮೆಲೆ , ಲಿಂಗಪ್ಪ ಮಲೆಕುಡಿಯ ಅರಸಿಕಟ್ಟೆ , ಮಾಜಿ ತಾ.ಪಂಚಾಯತ್ ಸದಸ್ಯೆ ಜಯಾಶೀಲ , ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಂದನಾ ಭಂಡಾರಿ ಹಾಗೂ ಇತರರು ಇದ್ದರು.ಶೇಖರ ಲಾಯಿಲ ಸ್ವಾಗತಿಸಿ ವಂದಿಸಿದರು.ಪ್ರತಿಭಟನಾಕಾರರು ಬೆಳ್ತಂಗಡಿ ಎಸ್.ಐ ಮೂಲಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Related Posts

Leave a Reply

Your email address will not be published.