ಕೋವಿಡ್ ನೆಪದಲ್ಲಿ ಭಾರತ ಜೋಡೋ ಯಾತ್ರೆ ತಡೆಯುವ ಷಡ್ಯಂತ್ರ : ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ ಆರೋಪ

ಪುತ್ತೂರು: ಭಾರತವನ್ನು ಬೆಸೆಯುವ ನಿಟ್ಟಿನಲ್ಲಿ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ ಜೋಡೋ ಯಾತ್ರೆಯಿಂದ ಕಂಗೆಟ್ಟಿರುವ ಬಿಜೆಪಿಯು ಇದೀಗ ಅದನ್ನು ತಡೆಯುವ ನಿಟ್ಟಿನಲ್ಲಿ ಕೋವಿಡ್ ನೆಪ ಬಳಸಿಕೊಳ್ಳುತ್ತಿದೆ ಎಂದು ಕೆಪಿಸಿಸಿ ರಾಜ್ಯ ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ ಆರೋಪಿಸಿದ್ದಾರೆ.

ಅವರು ಶನಿವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜೋಡೋ ಯಾತ್ರೆಯನ್ನು ನಿಲ್ಲಿಸಿ ಇಲ್ಲದಿದ್ದಲ್ಲಿ ಕೋವಿಡ್ ನಿಯಮಾವಳಿಯನ್ನು ಪಾಲಿಸಿಕೊಂಡು ಮುನ್ನಡೆಯಿರಿ ಎಂದು ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸರ್ಕಾರದ ಆರೋಗ್ಯ ಸಚಿವರು ಮನವಿ ಮಾಡಿದ್ದಾರೆ. ಈ ಮನವಿಯ ಹಿಂದೆ ಜೋಡೋ ಯಾತ್ರೆಯನ್ನು ತಡೆಯುವ ಶಡ್ಯಂತ್ರವಿದೆ. ಜೋಡೋ ಯಾತ್ರೆಯ ಯಶಸ್ವಿಯಿಂದಾಗಿ ಇದೀಗ ಬಿಜೆಪಿಗೆ ಭಯವಾಗಿದೆ. ಅದಕ್ಕಾಗಿ ಇದನ್ನು ತಡೆಯುವ ದುರಾಲೋಚನೆ ನಡೆಸುತ್ತಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ವಿ.ಎಚ್.ಶುಕೂರ್ ಹಾಜಿ, ಸಾಮಾಜಿಕ ಜಾಲತಾಣದ ವಕ್ತಾರ ರಂಜಿತ್ ಬಂಗೇರಾ ಉಪಸ್ಥಿತರಿದ್ದರು.

Related Posts

Leave a Reply

Your email address will not be published.