ಭಾರತ್ ಜೋಡೋ : ರಾಹುಲ್ ಜೊತೆಯಾದ ಎಂ.ಆರ್. ಸೀತಾರಾಂ: ಯಾತ್ರೆಯ ಸಕಾರಾತ್ಮಕ ಪರಿಣಾಮಗಳ ಕುರಿತು ಚರ್ಚೆ

ಬೆಂಗಳೂರು,ಅ,8: ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರೊಂದಿಗೆ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎಂ.ಆರ್.ಸೀತಾರಾಂ ಇಂದು ಜೊತೆಯಾದರು. ತುಮಕೂರು ಜಿಲ್ಲೆಯ ಮಾಯಸಂದ್ರದಿಂದ ಬಾನಸಂದ್ರ ವರೆಗೆ ಮೂರು ಗಂಟೆಗಳ ಕಾಲ 12 ಕಿಲೋಮೀಟರ್ ದೂರ ಸಾಗಿದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಪಾದಯಾತ್ರೆ ಯಶಸ್ವಿಯಾಗುತ್ತಿರುವ ಬಗ್ಗೆ ಎಂ.ಆರ್. ಸೀತಾರಾಂ ಸಂತಸ ಹಂಚಿಕೊಂಡರು. ಪಕ್ಷ ಸಂಘಟನೆ ಕುರಿತಂತೆಯೂ ಚರ್ಚಿಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಎಂ.ಆರ್.ಸೀತಾರಾಂ, ರಾಹುಲ್ ಗಾಂಧಿಯವರ ಪಾದಯಾತ್ರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಈ ಯಾತ್ರೆ ಹೊಸ ದಿಕ್ಕು ತೋರಲಿದೆ ಎಂದರು. ಭಾರತ್ ಜೋಡೋ ಯಾತ್ರೆಯಲ್ಲಿ ಎಂ.ಆರ್. ಸೀತಾರಾಂ ಅವರು ತುಮಕೂರು ಜಿಲ್ಲೆಯ ತುರುವೇಕೆರೆ, ಚಿಕ್ಕನಾಯಕನಹಳ್ಳಿ ಮತ್ತು ಹಿರಿಯೂರು ಭಾಗದ ಉಸ್ತುವಾರಿ ವಹಿಸಿಕೊಂಡಿದ್ದಾರೆ.

dr m v shetty

Related Posts

Leave a Reply

Your email address will not be published.