ಫೆ.18 : ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ 15 ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಮಹಾ ಶಿವರಾತ್ರಿ ಆಚರಣೆ.

ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ಪ್ರಾಣ ಪ್ರತಿಷ್ಠೆ ಮಾಡಿರುವ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ 2023ರ ಫೆಬ್ರವರಿ18 ರಂದು 15 ನೇ ಪ್ರತಿಷ್ಠಾ ವರ್ಧಂತ್ಯುತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಅಂದು ಬೆಳಗ್ಗೆ 6 ಗಂಟೆಗೆ ಅಷ್ಟ ದ್ರವ್ಯ ಮಹಾಗಣಪತಿ ಹೋಮ, ರುದ್ರ ಮಂತ್ರ ಪಠನ,ಸಾಮೂಹಿಕ ಶ್ರೀ ಲಲಿತಾ ಸಹಸ್ರನಾಮಾರ್ಚನೆ, ಮಹಾ ಮೃತ್ಯುಂಜಯ ಹೋಮ,ಸತ್ಸಂಗ, ಮಹಾ ಸುದರ್ಶನ ಹೋಮ, ಕಳಶ ಪೂಜೆ,ಪಂಚಗವ್ಯ,ನವಕ, ಮಹಾ ಅಭಿಷೇಕ, ಧಾರಾ, ಆರತಿ ಮೊದಲಾದ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಉರ್ವ ಶ್ರೀ ಮಾರಿಯಮ್ಮ ಕ್ಷೇತ್ರದ ಲಲಿತಾ ಸಹಸ್ರನಾಮ ಪಾರಾಯಣ ಬಳಗದ ಸೇವೆ, ಕುಣಿತ ಭಜನೆ,ನಾಮಸಂಕೀರ್ತನೆಗಳು ಶ್ರದ್ಧಾಭಕ್ತಿಯಿಂದ ಜರುಗಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

Related Posts

Leave a Reply

Your email address will not be published.