HomeFresh Newsಬೋಳ ವಾರಾಂತ್ಯದ ರಂಗ ತರಬೇತಿ ಶಿಬಿರ

ಬೋಳ ವಾರಾಂತ್ಯದ ರಂಗ ತರಬೇತಿ ಶಿಬಿರ

ಯಕ್ಷಾಕ್ಷರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ.), ಬೋಳ ಇವರ ವತಿಯಿಂದ ವಾರಾಂತ್ಯದ ರಂಗ ತರಬೇತಿ ಶಿಬಿರ ಆಯೋಜಿಸಲಾಗಿದೆ.
ಅಭಿನಯದಲ್ಲಿ ಆಸಕ್ತಿ ಇದ್ದರೂ ಎಲ್ಲಿ, ಯಾರು ತರಬೇತಿ ನೀಡುತ್ತಾರೆ ಎಂಬ ಗೊಂದಲವೇ? ನಾಟಕ, ಧಾರಾವಾಹಿ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಅಭಿನಯಿಸುವ ತುಡಿತವಿದೆಯೇ? ಉದ್ಯೋಗ, ಕಾಲೇಜು ಅಥವಾ ಮನೆಯ ಜವಾಬ್ದಾರಿಗಳಿಂದಾಗಿ ನಿರಂತರವಾಗಿ ರಂಗ ತರಬೇತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲವೇ?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ವಾರಾಂತ್ಯದಲ್ಲಿ ರಂಗ ತರಬೇತಿ ಪಡೆಯುವ ಸುವರ್ಣ ಅವಕಾಶ ಇಲ್ಲಿದೆ.
ಈಗಾಗಲೇ ನಾಟಕಗಳಲ್ಲಿ ಅಭಿನಯಿಸಿರುವವರು ತಮ್ಮ ಅಭಿನಯದ ಆಳವನ್ನು ಹೆಚ್ಚಿಸಿಕೊಳ್ಳಲು ಹಾಗೂ ನಾಟಕ ರಂಗದ ವಿವಿಧ ವಿಭಾಗಗಳ ಕುರಿತು ತಿಳಿದುಕೊಂಡು ಹೊಸತನ್ನು ಕಲಿಯಲು ಈ ತರಬೇತಿ ಸಹಕಾರಿಯಾಗಲಿದೆ.
ಹೆಸರಾಂತ ರಂಗಕರ್ಮಿಗಳು ಹಾಗೂ ನಿರ್ದೇಶಕರಿಂದ ವಾರಾಂತ್ಯದ ಅಭಿನಯ ತರಬೇತಿ ಸರಣಿ ಕಾರ್ಯಕ್ರಮ ನಡೆಯಲಿದ್ದು, ರಂಗಭೂಮಿಯಲ್ಲಿ ಆಸಕ್ತಿ ಹೊಂದಿರುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಈ ಕೆಳಕಂಡ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಯಕ್ಷಾಕ್ಷರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ.), ಬೋಳ ಗೌರವಾಧ್ಯಕ್ಷರಾದ ಶ್ರೀ ಉದಯ ಶೆಟ್ಟಿ ಮೂಡುಮನೆ ಹಾಗೂ ಅಧ್ಯಕ್ಷರಾದ ಬೋಳ ಸುಧಾಕರ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊಬೈಲ್ ಸಂಖ್ಯೆ:📞 9986383907

swarna sep
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments