ಬ್ರಹ್ಮಾವರ: ಹಲಸು ಮತ್ತು ಹಣ್ಣು ಮೇಳಕ್ಕೆ ಚಾಲನೆ

ಬ್ರಹ್ಮಾವರ: ಬ್ರಹ್ಮಾವರ ರೋಟರಿ ಕ್ಲಬ್, ಕೃಷಿ ವಿಜ್ಞಾನ ಕೇಂದ್ರ ಮತ್ತು ನಾನಾ ಸಂಘ ಸಂಸ್ಥೆಯವರ ಸಹಕಾರದಲ್ಲಿ ಎಸ್‌ಎಂಎಸ್ ಸಮುದಾಯ ಭವನದಲ್ಲಿ ಹಲಸು ಮತ್ತು ಹಣ್ಣು ಮೇಳಕ್ಕೆ ಚಾಲನೆ ನೀಡಲಾಯಿತು.
ಹಲಸು ಮತ್ತು ಹಣ್ಣು ಮೇಳ 2024 ಕಾರ್ಯಕ್ರಮವನ್ನು ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಬಿ ಎಂ ಭಟ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಿಸರ್ಗದತ್ತ ಆಹಾರವಾದ ಹಲಸು ಮಾತ್ರ ರಾಸಾಯನಿಕ ರಹಿತವಾಗಿರುವ ಹಣ್ಣು. ಗ್ರಾಮೀಣ ಭಾಗದ ಹಲವಾರು ಹಣ್ಣುಗಳಿಗೆ ಸೂಕ್ತ ಮಾರುಕಟ್ಟೆ ದೊರಕಿದಲ್ಲಿ ರಾಸಾಯನಿಕ ಬಳಕೆಯ ಫಾಸ್ಟ್ ಫುಡ್‌ನಿಂದ ಜನರು ಮುಕ್ತರಾಗಿ ನಿಸರ್ಗದತ್ತ ಹಣ್ಣುಗಳ ತಿನಿಸಿನಿಂದ ಆರೋಗ್ಯವಂತ ಜೀವನ ನಡೆಸಲು ಸಾಧ್ಯ ಎಂದರು.
ಇದೇ ಸಂದರ್ಬದಲ್ಲಿ ಪ್ರಗತಿಪರ ಕೃಷಿಕರಾದ ಶ್ರೀನಿವಾಸ ಹೆಗ್ಡೆ ಕೊಕ್ಕರ್ಣೆ, ಸುರೇಶ್ ಕರ್ಕೆರಾ ಇವರನ್ನು ಸನ್ಮಾನಿಸಲಾಯಿತು.
ಬ್ರಹ್ಮಾವರ ರೋಟರಿಯ ಉದಯ ಕುಮಾರ್ ಶೆಟ್ಟಿ ,ಕೃಷಿ ಸಂಶೋಧನಾ ನಿರ್ದೇಶಕ ಡಾ, ಲಕ್ಷ್ಮಣ, ಎಸ್ ಎಂ.ಎಸ್ ಸಿರಿಯನ್‌ಚರ್ಚ್ ಫಾಧರ್ ಎಂ. ಸಿ ಮಥಾಯಿ. ಬ್ಯಾಂಕ್ ಆಫ್ ಬರೋಡಾದ ವಿದ್ಯಾಧರ್ ಶೆಟ್ಟಿ, ಆಲ್ವಿನ್ ಕ್ವಾಡ್ರಸ್, ಸಚಿನ್ ಹೆಗ್ಡೆ, ಡಾ, ಸುಧೀರ್ ಕಾಮತ್, ಎಸ್ ಕೆ.ಪಿ. ಏ. ಜಿಲ್ಲಾ ಅಧ್ಯಕ್ಷ ಪದ್ಮಪ್ರಸಾದ್ ಜೈನ್,ಪ್ರತೀಶ್ ಕುಮಾರ್, ಮಿಲ್ಟನ್ ಒಲಿವೇರಾ, ರೋಟರಿ ಸಂಕಯ್ಯ ಶೆಟ್ಟಿ, ಡಾ, ಧನಂಜಯ್, ಆಲ್ವಿನ್ ಅಂದ್ರಾದೆ, ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು. ರಾಜ್ಯದ ನಾನಾ ಭಾಗದಿಂದ ನೂರಾರು ತಿನಿಸುಗಳ ಮಳಿಗೆಗಳು ಮೇಳದಲ್ಲಿತ್ತು.
