ಬ್ರಹ್ಮಾವರ : ವಿಶ್ವಕ್ಕೆ ಅಚ್ಚರಿ ಮೂಡಿಸಿದ ಭಾರತದ ಚಂದ್ರಯಾನದ ಯಶಸ್ಸಿಗೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಸಂಭ್ರಮಾಚರಣೆ ನಡೆಸಿದ್ದಾರೆ.ಬ್ರಹ್ಮಾವರ ಫ್ರೆಂಡ್ಸ್ ಮತ್ತು ಡೈಮಂಡ್ ಜಿಮ್‍ನ ಸದಸ್ಯರು ಭಾರತದ ಹೆಮ್ಮೆಯ ವಿಜ್ಞಾನಿಗಳ ತಂಡದ ಶ್ರಮಕ್ಕೆ, ಇಸ್ರೋ ಸಂಸ್ಥೆಗೆ, ದೇಶದ ಪ್ರಧಾನಿ ನರೇಂದ್ರ ಮೋದಿಜೀಯವರಿಗೆ ಮತ್ತು ಭಾರತ ಮಾತೆಗೆ ಜೈ ಕಾರ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ತಂಡದ ದೇವಾನಂದ ನಾಯಕ್, ಅರ್ಜುನ ಪ್ರಭು, ಮಧುಸೂಧನ ಇನ್ನಿತರ ಸದಸ್ಯರುಗಳು ಹಾಜರಿದ್ದರು.

