HomeFresh Newsಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಆ.20ರಿಂದ ದೃಢಕಲಶಾಭಿಷೇಕ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಆ.20ರಿಂದ ದೃಢಕಲಶಾಭಿಷೇಕ

ಪಡುಬಿದ್ರಿ: ನವೀಕೃತಗೊಂಡಿರುವ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪುನಃ ಸುಪ್ರತಿಷ್ಠಿತರಾಗಿ ಬ್ರಹ್ಮಕಲಶಾಭಿಷಿಕ್ತರಾದ ಕ್ಷೇತ್ರಾಭಿಮಾನಿ ದೇವತೆಗಳಾದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರಿಗೆ ದೃಢಕಲಶಾಭಿಷೇಕ ಕಾರ್ಯಕ್ರಮ ಆ.20ರಿಂದ 22ರವರೆಗೆ ನಡೆಯಲಿದೆ.
ಶ್ರೀ ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ ಆಗಸ್ಟ್ 20ರ ಗುರುವಾರ ಸಂಜೆ 4.30ರಿಂದ ಆಗಸ್ಟ್ 22ರ ಶನಿವಾರ ಮಧ್ಯಾಹ್ನದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.


ಕಾರ್ಯಕ್ರಮದ ಸಮಾರೋಪದ ಅಂಗವಾಗಿ ಆಗಸ್ಟ್ 22ರ ಶನಿವಾರ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಆಯೋಜಿಸಲಾಗಿದೆ.
ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ದೇವಳಕ್ಕೆ ಆಗಮಿಸಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಗಂಧಪ್ರಸಾದಗಳನ್ನು ಸ್ವೀಕರಿಸಿ ಶ್ರೀ ದೇವರುಗಳ ದಿವ್ಯಾನುಗ್ರಹಕ್ಕೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕಾರ್ಯನಿರ್ವಾಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Sudha Interior new 1
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments