HomeFresh NewsBynduru : ಚಂದು ಪೂಜಾರ್ತಿ ಅವರ ಸುಸಜ್ಜಿತ ಮನೆಯ ಉದ್ಘಾಟನಾ ಕಾರ್ಯಕ್ರಮ

Bynduru : ಚಂದು ಪೂಜಾರ್ತಿ ಅವರ ಸುಸಜ್ಜಿತ ಮನೆಯ ಉದ್ಘಾಟನಾ ಕಾರ್ಯಕ್ರಮ

ಬೈಂದೂರಿನ ನಾಡ ಗ್ರಾ.ಪಂ. ವ್ಯಾಪ್ತಿಯ ತೆಂಕಬೈಲು ಗೋಳಿಹಕ್ಲು ಕಾಲೋನಿಯಲ್ಲಿ ಶಿಥಿಲಾವ್ಯಸ್ಥೆಯಲ್ಲಿರುವ ಗುಡಿಸಲಿನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಚಂದು ಪೂಜಾರ್ತಿ ಅವರಿಗೆ ಸಮಾನ ಮನಸ್ಕರ ಯುವಕರ ತಂಡ ಆಸರೆಯಾಗಿದೆ. ಸುಸಜ್ಜಿತವಾಗಿ ಮನೆಯನ್ನು ನಿರ್ಮಿಸಿಕೊಟ್ಟಿದ್ದು, ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಲಯನ್ಸ್ ಕ್ಲಬ್ ನಾವುಂದ, ಅಜ್ಜಿ ಮನೆ ಕನಸು ನನಸು ಮಾಡೋಣ ವಾಟ್ಸಾಪ್ ಗ್ರೂಪ್, ನಾಡ ಗ್ರಾ.ಪಂ ಹಾಗೂ ಪತ್ರಕರ್ತರ ಮಿತ್ರ ಸಹಕಾರದಿಂದ ಮಂಜುನಾಥ ನಿಲಯ ಉದ್ಘಾಟನೆಗೊಂಡಿತು. ಗಂಗೊಳ್ಳಿ ಪಿಎಸ್‍ಐ ವಿನಯ್ ಕೊರ್ಲಹಳ್ಳಿ ಅಜ್ಜಿ ಮನೆಯ ನೂತನ ನಾಮಫಲಕ ಉದ್ಘಾಟಿಸಿದರು.

ಲಯನ್ಸ್ ಕ್ಲಬ್ ನಾವುಂದದ ಅಧ್ಯಕ್ಷ ಜಗದೀಶ್ ಕುದ್ರುಕೋಡು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಾವುಂದ ಲಯನ್ಸ್ ಕ್ಲಬ್ ವತಿಯಿಂದ ಕೊರೊನ ಸಮಯದಲ್ಲಿ ಈ ಭಾಗದಲ್ಲಿ ಆಹಾರದ ಕಿಟ್ ವಿತರಣೆಯ ಸಮಯದಲ್ಲಿ ಅಜ್ಜಿಯ ಮನೆ ನೋಡಿ, ಬಹಳ ಬೇಸರಗೊಂಡಿದ್ದೇವು. ಈ ಅಜ್ಜಿಗೊಂದು ಮನೆ ನಿರ್ಮಿಸಿಕೊಡಬೇಕು ಎಂದು ವಾಟ್ಸಾಪ್ ಗ್ರೂಪ್ ರಚಿಸಿ, ಅಲ್ಲಿ ಸಮಾನ ಮನಸ್ಕರ ಯುವಕರನ್ನು ರಚಿಸಿಕೊಂಡು ಹಾಗೂ ದಾನಿಗಳ ಸಹಕಾರದಿಂದ ಚಂದು ಪೂಜಾರ್ತಿ ಅವರಿಗೆ ಮನೆಯನ್ನು ಕಟ್ಟಿಕೊಟ್ಟು ಅವರ ಕನಸ್ಸನ್ನು ನನಸು ಮಾಡಿದ ಸಂತೋಷ ನಮಗಿದೆ ಎಂದರು. ಲಯನ್ಸ್ ಕ್ಲಬ್ ವಲಯ ಉಪಾಧ್ಯಕ್ಷ ನರಸಿಂಹ ದೇವಾಡಿಗ ಚಂದು ಪೂಜಾರ್ತಿ ಅವರಿಗೆ ಕೀ ಹಸ್ತಾಂತರಿಸಿದ್ದರು.

ಚಂದು ಪೂಜಾರ್ತಿ ಮಾತನಾಡಿ, ನಾನು ಕಳೆದ 30 ವರ್ಷಗಳಿಂದ ಒಂಟಿಯಾಗಿ ಮಣ್ಣಿನ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದೆ. ಈ ಮಣ್ಣಿನ ಮನೆ ಮಳೆಗಾಲದಲ್ಲಿ ಕುಸಿಯುವ ಸ್ಥಿತಿಯಲ್ಲಿತ್ತು. ನನ್ನ ಕಷ್ಟಕ್ಕೆ ಸ್ಪಂದಿಸಿದ ಎಲ್ಲರಿಗೂ ಚಿರಋಣಿಯಾಗಿದ್ದೇನೆ ಎಂದರು.

ಈ ಸಂದರ್ಭದಲ್ಲಿ ನಾಡ ಗ್ರಾ.ಪಂ ಸದಸ್ಯ ಉದಯ ಜೋಗಿ, ಲಯನ್ಸ್ ಕ್ಲಬ್ ನಾವುಂದದ ನೂತನ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಉದ್ಯಮಿ ಸಮರ್ ಶೆಟ್ಟಿ, ಮಂಜುನಾಥ ಪೂಜಾರಿ ಬೆಳ್ಳಾಡಿ, ಕಾಮೇಶ್ ದೇವಾಡಿಗ, ರಾಜು, ಅಜ್ಜಿ ಮನೆ ಕನಸು ನನಸು ಮಾಡೋಣ ವಾಟ್ಸಾಪ್ ಗ್ರೂಪ್ ಸದಸ್ಯರು ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments