ಮೂಡುಬಿದಿರೆ : ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ನೀರ್ಕೆರೆ ಶಾಲೆಯ ಮುಖ್ಯ ಶಿಕ್ಷಕಿ ಯಮುನಾ ಆಯ್ಕೆ
ಮೂಡುಬಿದಿರೆ : ಪ್ರಸಕ್ತ ಸಾಲಿನ ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಮೂಡುಬಿದಿರೆ ತಾಲೂಕಿನ ತೆಂಕಮಿಜಾರು ಗ್ರಾಪಂ ವ್ಯಾಪ್ತಿಯ ನಿರ್ಕೇರೆ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಶಾಲೆಯ ಮುಖ್ಯ ಶಿಕ್ಷಕಿ ಯಮುನಾ.ಕೆ ಅವರು ಆಯ್ಕೆಯಾಗಿದ್ದಾರೆ.
ಮೂಡುಬಿದಿರೆ : ಪ್ರಸಕ್ತ ಸಾಲಿನ ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಮೂಡುಬಿದಿರೆ ತಾಲೂಕಿನ ತೆಂಕಮಿಜಾರು ಗ್ರಾಪಂ ವ್ಯಾಪ್ತಿಯ ನಿರ್ಕೇರೆ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಶಾಲೆಯ ಮುಖ್ಯ ಶಿಕ್ಷಕಿ ಯಮುನಾ.ಕೆ ಅವರು ಆಯ್ಕೆಯಾಗಿದ್ದಾರೆ.
ಕಳೆದ 36 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಯಮುನಾ ಅವರು ಬೈಂದೂರಿನಲ್ಲಿ 6ವರ್ಷ, ಕೆಸರುಗದ್ದೆ ಬೆಳುವಾಯಿ ಮೈನ್ ಶಾಲೆಯಲ್ಲಿ 17 ವರ್ಷ ಶಿಕ್ಷಕಿಯಾಗಿ, ಕಳೆದ 13 ವರ್ಷಗಳಿಂದ ನಿರ್ಕೆರೆ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
2016 ದ.ಕ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದರು.
ಗ್ರಾಮೀಣ ಮಟ್ಟದ ಶಾಲೆ, ಶಿಕ್ಷಕಿಯನ್ನು ಗುರುತಿಸಿರುವುದು ಸಂತೋಷವಾಗಿದೆ. ಮೂರು ದಶಕಗಳಿಂದ ಶಿಕ್ಷಕಿಯಾಗಿ ಸಾವಿರಾರು ವಿದ್ಯಾರ್ಥಿಗಳ ಪ್ರೀತಿ, ಗೌರವ ಗಳಿಸಿದ್ದೇನೆ. ಇದೀಗ ರಾಜ್ಯ ಸರ್ಕಾರವು ನನ್ನನ್ನು ಮತ್ತಷ್ಟು ಖುಷಿಯನ್ನು ನೀಡಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.