ಶ್ರೀಮಹಾಗಣಪತಿ ಸೇವಾ ಸಮಿತಿ ಗುಡ್ಡೆ ಹೋಟೆಲ್ ನಾಡ : ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಲೋಕೇಶ್ ಕಾಂಚನ್ ಅಯ್ಕೆ
ಕಳೆದ 12 ವರ್ಷಗಳಿಂದ ಸಾರ್ವಜನಿಕ ಶ್ರೀ ಮಹಾಗಣಪತಿ ಗಣೇಶೋತ್ಸವ ಸಮಿತಿಯಿಂದ ಹಲವಾರು ಜನಪರ ಹಾಗೂ ಸಮಾಜಮುಖಿ ಕೆಲಸ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಇತ್ತಿಚೆಗೆ ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಶಿರೂರು, ಮುದ್ದು ಮನೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಿದ್ದು ,ಸುಮಾರು ನೂರೈವತ್ತಕ್ಕೂ ಮಿಗಿಲಾದ ಊರಿನ ಜನರು ನೇತ್ರ ತಪಾಸಣೆ ಕಾರ್ಯಕ್ರಮದ ಸದುಪಯೋಗ ಪಡೆದು ಕೊಂಡಿದ್ದರು.
ಗುಡ್ಡೆ ಹೋಟೆಲ್ ಶ್ರೀ ಮಹಾಗಣಪತಿ ಗಣೇಶೋತ್ಸವ ಸೇವಾ ಸಮಿತಿ ವಠಾರದಲ್ಲಿ ನೂತನ ಗಣೇಶೋತ್ಸವ ಸಮಿತಿಯನ್ನು ರಚಿಸಲಾಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ಲೋಕೇಶ್ ಕಾಂಚನ್ ಜೆಡ್ಡು,ಗೌರವ ಅಧ್ಯಕ್ಷರಾಗಿ ಶ್ರೀ ಶರತ್ ಕುಮಾರ ಶೆಟ್ಟಿ “ಯಕ್ಷೇಶ್ವರಿ” ಬೆಳ್ಳಾಡಿ,
ಉಪಾಧ್ಯಕ್ಷರಾಗಿ ಪಂಚಾಯತ್ ಗುತ್ತಿಗೆದಾರ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಹೆಮ್ಮುಂಜೆ ಮನೆ.ಕಾರ್ಯದರ್ಶಿಯಾಗಿ ಮಾಜಿ ಕುಂದಾಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಶ್ರೀ ಶಂಕರ ಶೆಟ್ಟಿ ಬೆಳ್ಳಾಡಿ ಹೊಂಡದಮನೆ.ಜೊತೆ ಕಾರ್ಯದರ್ಶಿಯಾಗಿ ಶ್ರೀ ಆದರ್ಶ ಪೂಜಾರಿ ಗುಬ್ಯಾಡಿ,
ಕೋಶಾಧಿಕಾರಿಯಾಗಿ ಶ್ರೀ ಕಾಮೇಶ್ ದೇವಾಡಿಗ ತೆಂಕಬೈಲು,ಲೆಕ್ಕ ಪರಿಶೋಧಕರಾಗಿ ಶ್ರೀ. ಬಿ ಜಗನ್ನಾಥ್ ಸಾಲಿಯಾನ್ (ಕೆ.ಸಿ. ಡಿ.ಸಿ) ಗುಡ್ಡೆ ಹೋಟೆಲ್.ನಾಡಾ ಪಂಚಾಯತಿನ ಮಾಜಿ ಅಧ್ಯಕ್ಷ ಶ್ರೀ ರಾಜೀವ ಶೆಟ್ಟಿ ಹೆಮ್ಮುಂಜೆ ಮನೆ ಹಾಗೂ ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿಯ ಅಧಿಕಾರಿ ಶ್ರೀ ಶಿವಕುಮಾರ ಪೂಜಾರಿ ಹೆಮ್ಮಾಡಿ, ಜಾಹೀರಾತು ವ್ಯವಸ್ಥಾಪಕರಾಗಿ ಶ್ರೀ ಚಂದ್ರಶೇಖರ ಆಚಾರ್ಯ ಹೆಮ್ಮುಂಜೆ ಮತ್ತು
ಶ್ರೀ ಹರೀಶ್ ಜೆಡ್ಡು ರವನ್ನು ಸಮಿತಿ ಸರ್ವ ಸದಸ್ಯರ ಒಮ್ಮತದಿಂದ ಆಯ್ಕೆ ಮಾಡಲಾಯಿತು. ನೂತನ ಸಮಿತಿ ರಚನೆಗೆ ಸಹಕರಿಸಿದ ಎಲ್ಲಾ ಸದಸ್ಯರಿಗೆ ಹಾಗೂ ಊರ ಗ್ರಾಮಸ್ಥರಿಗೆ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು.